ಅರ್ಹ ಕುಟುಂಬಗಳಿಗೆ ನಿವೇಶನ ನೀಡಲು ಎಸ್‌ಡಿಪಿಐ ನೆರಿಯ ಗ್ರಾಮ ಸಮಿತಿ ಮನವಿ

ನೆರಿಯ: ಇನ್ನೂ ಸ್ವಂತ ಸೂರು ಹೊಂದಿರದ ನೆರಿಯ ಗ್ರಾಮ ವ್ಯಾಪ್ತಿಯ ಅರ್ಹ ಬಡ ಕುಟುಂಬಗಳಿಗೆ ಶೀಘ್ರದಲ್ಲೇ ನಿವೇಶನ ಒದಗಿಸಿಕೊಡುವಂತೆ ಎಸ್‌ಡಿಪಿಐ ನೆರಿಯ ಗ್ರಾಮ ಸಮಿತಿಯಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಈ ಸಂದರ್ಭ ಅರ್ಹರ ಜೊತೆ ಮಾತುಕತೆ ನಡೆಸಿದ ಪಕ್ಷದ ಮುಖಂಡರು ಮನವಿ ಮೂಲಕ ಪ್ರಥಮ ಹೆಜ್ಜೆ ಇಡಲು ತೀರ್ಮಾನಿಸಿತು. ಮುಂದಕ್ಕೆ ಇದರಿಂದ ಯಾವುದೇ ಸ್ಪಂದನ ಆಗದಿದ್ದಲ್ಲಿ ಮುಂದಿನ ಸಭೆಯಲ್ಲಿ ನಿರ್ಧಾರಕ್ಕೆ ಬರುವುದಾಗಿ ತೀರ್ಮಾನಿಸಿ ಮನವಿ ನೀಡಲು ನಿರ್ಧರಿಸಲಾಯಿತು. ಮನವಿ ಸಲ್ಲಿಕೆ ವೇಳೆ ಜಿಲ್ಲಾ ಸಮಿತಿ ಉಪಾಧ್ಯಕ್ಷ ಆಂಟನಿ ನಾವೂರು, ನೆರಿಯ ಗ್ರಾಮ ಸಮಿತಿ ಉಸ್ತುವಾರಿ ರಿಯಾಝ್ ಪುಂಜಾಲಕಟ್ಟೆ, ನೆರಿಯ ಗ್ರಾ.ಸಮಿತಿ ಅಧ್ಯಕ್ಷ ಜೋಸೆಫ್, ಕಾರ್ಯದರ್ಶಿ ಪೌಲೋಸ್ ಹಾಗೂ ಗ್ರಾ.ಪಂ ಮಾಜಿ ಸದಸ್ಯ ಫಾರೂಕ್ ನೆರಿಯ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.