ಪೆರಾಡಿ: ಸಾರ್ವಜನಿಕ ಸ್ಥಳದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಧ್ವಜವನ್ನು ತೆರವುಗೊಳಿಸಲು ಪೆರಾಡಿ ನಾಗರಿಕರಿಂದ ಮರೋಡಿ ಗ್ರಾಮ ಪಂಚಾಯತ್ಗೆ ಮನವಿ ಸಲ್ಲಿಸಲಾಯಿತು.
ಮರೋಡಿ ಗ್ರಾ. ಪಂ. ವ್ಯಾಪ್ತಿಯಲ್ಲಿನ ಜನರು ಶಾಂತಿ ಸೌಹಾರ್ದದತೆಯಿಂದ ಜಾತಿ ಭೇದ ಮರೆತು ಒಂದಾಗಿ ಬಾಳುತ್ತಿದ್ದು, ಈ ನಡುವೆ ಇದ್ದಕ್ಕಿದ್ದಂತೆ ಕೆಲವು ತಿಂಗಳ ಹಿಂದೆ ಗ್ರಾಮದ ಮಾವಿನಕಟ್ಟೆ ಜಂಕ್ಷನ್ನಲ್ಲಿ ಒಂದು ಧರ್ಮದ ಧ್ವಜವನ್ನು ಹಾರಿಸಿದ್ದರಿಂದ ಇದು ಸಾರ್ವಜನಿಕರ ಜಾತ್ಯಾತೀತ ಮನೋಭಾವಕ್ಕೆ ಧಕ್ಕೆ ಮತ್ತು ಮುಂದೆ ಗ್ರಾಮದಲ್ಲಿ ಸೌಹಾರ್ದತೆ ಕೆಡಲು ಕಾರಣವಾಗಬಹುದು ಎಂದು ಮನಗಂಡ ಸ್ಥಳೀಯ ಜನರು ಮರೋಡಿ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಆಶಾಲತಾ ಅವರಿಗೆ ಮನವಿ ಸಲ್ಲಿಸಿದ್ದಾರೆ.