HomePage_Banner_
HomePage_Banner_
HomePage_Banner_

ಹರಿದ್ವಾರ : ಕನ್ಯಾಡಿ ಶಾಖಾ ಮಠದಲ್ಲಿ ವಾರ್ಷಿಕ ಕಾರ್ಯಕ್ರಮ

Advt_NewsUnder_1

ಧರ್ಮಸ್ಥಳ: ಶ್ರೀರಾಮ ಕ್ಷೇತ್ರ ಧರ್ಮಸ್ಥಳ ಕನ್ಯಾಡಿ ಇದರ ಶಾಖಾ ಮಠ ಹರಿದ್ವಾರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸಾಧನಾ ಕುಟೀರದಲ್ಲಿ ವಾರ್ಷಿಕ  ಕಾರ್ಯಕ್ರಮ ನ. 25 ರಂದು ಜರುಗಿತು.

ಕಾರ್ಯಕ್ರಮದಲ್ಲಿ ಗುರುಗಳಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಮಹಾಮಂಡಲೇಶ್ವರ ಶ್ರೀ ಶಿವಪ್ರೇಮಾನಂದಜೀ ಮಹಾರಾಜ್, ಮಹಾಮಂಡಲೇಶ್ವರ ಶ್ರೀ ಹರಿ ಚೇತನಾ ನಂದಜಿ ಮಹಾರಾಜ್, ಮಹಾಮಂಡಲೇಶ್ವರ ಜಗದೀಶ್ ದಾಸ್ ಜೀ ಮಹಾರಾಜ್, ಮಹಾಮಂಡಲೇಶ್ವರ ಯಮುನಾ ಜಿ ಮಹಾರಾಜ್, ದೇವಾನಂದ ಸರಸ್ವತಿ ಮಹಾರಾಜ್, ಗೌರಿಶಂಕರ್ ಮೊಹತಾ, ಇನ್ನಿತರ ಸಾಧು ಸಂತರು ಸತ್ಸಂಗ ಕಾರ್ಯಕ್ರಮ ನೆರವೇರಿಸಿಕೊಟ್ಟರು.

ಶ್ರೀರಾಮ ತಾರಕ ಯಜ್ಞ ಹಾಗೂ ಭಜನಾ ನಾಮ ಸಂಕೀರ್ತನೆ ಕಾರ್ಯಕ್ರಮ ನಡೆಯಿತು . ಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ ಜಿಲ್ಲಾ ಮತ್ತು ಉತ್ತರ ಕನ್ನಡ ಜಿಲ್ಲೆಯಿಂದ ಸುಮಾರು ಮುನ್ನೂರು ಜನ ಗುರು ಭಕ್ತರು ಪಾಲ್ಗೊಂಡರು. ಪ್ರಮುಖರಾದ ಭಟ್ಕಳ ಮಾಜಿ ಶಾಸಕ ಮಾಂಗ್ ಕಾಲ್ ಎಸ್ ವೈದ್ಯ, ರಾಜಸ್ಥಾನದ ಉದ್ಯಮಿ ಭಗವತಿ ಪ್ರಸಾದ್ ಬಿಯಾನಿ, ಜೆ.ನ್. ನಾಯ್ಕ್ ಭಟ್ಕಳ, ಮಹೇಶ್ ಶಾಂತಿ ಹೆಜ್ಮಾಡಿ ,ಮನೋಜ್ ಜೋಶಿ ಮಾಧವಾಶ್ರಮ ಹರಿದ್ವಾರ , ಮೋಹನ್   ಉಜ್ಜೋಡಿ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ , ವಾಮನ್ ನಾಯಕ್ ಮಂಕಿ ,ಕೆ.ಆರ್. ನಾಯ್ಕ್ ಭಟ್ಕಳ, ವಿಠಲ್ ನಾಯಕ್ ಭಟ್ಕಳ, ವಿಶ್ವನಾಥ ಪೂಜಾರಿ ಕೊಳ್ನಾಡು , ಯತಿನ್ ಕುಮಾರ್ ಕಲ್ಲಡ್ಕ, ಜಯಪ್ರಕಾಶ್ ಬದಿನಾರು ಪುತ್ತೂರು , ಜಯರಾಮ ಪೂಜಾರಿ ಪುತ್ತೂರು, ಚಿತ್ತರಂಜನ್ ಕಲ್ಲಡ್ಕ  ಮತ್ತಿತರ ಗಣ್ಯರು ಉಪಸ್ಥಿತರಿದ್ದರು .
ಸಂಜೆ ಗುರುಗಳ ನೇತೃತ್ವದಲ್ಲಿ ಗಂಗಾ ನದಿ ತಟದಲ್ಲಿ ಗಂಗಾ ಸ್ನಾನ ಮತ್ತು ಗಂಗಾರತಿ  ನಡೆಯಿತು .

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.