HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೆಳ್ತಂಗಡಿ ಅನುಗ್ರಹ ಟ್ರೈನಿಂಗ್ ಕಾಲೇಜಿಗೆ ರಾಷ್ಟ್ರೀಯ ಪ್ರಶಸ್ತಿ

ಬೆಳ್ತಂಗಡಿ:  ಬೆಂಗಳೂರಿನಲ್ಲಿ   ಮಹೆಝ್ ಇಂಡಿಯಾ ಸಂಸ್ಥೆಯು ನ.24ರಂದು  ಆಯೋಜಿಸಿದ 3ನೇ ರಾಷ್ಟ್ರೀಯ ನಾನ್ ಗವರ್ನಮೆಂಟ್ ಆರ್ಗನೈಸೇಶನ್ ಕೌನ್ಸಿಲ್ ಮತ್ತು ಕಾರ್ಪೋರೇಟ್ ಸಮ್ಮಿಟ್ 2018 ಎಂಬ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಅನುಗ್ರಹ ಎಜುಕೇಶನ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್  ಇದರ ಅಂಗ ಸಂಸ್ಥೆಗಳಲ್ಲಿ ಮತ್ತು ಕಾರ್ಯಚಟುವಟಿಕೆಗಳಲ್ಲಿ ಒಂದಾದಾದ ಅನುಗ್ರಹ ಟ್ರೈನಿಂಗ್ ಕಾಲೇಜಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಅನುಗ್ರಹ ಸಂಸ್ಥೆಯ ಪ್ರಾಂಶುಪಾಲ ಜೈಸನ್ ಪಟ್ಟೇರಿಯಲ್, ಆಡಳಿತ ಮಂಡಳಿ ಸದಸ್ಯರುಗಳಾದ ಜಿ. ಇಸುಬು ಸವಣಾಲು, ಖಾಲಿದ್ ಮಂಗಳೂರು, ಅಬ್ದುಲ್ ರಶೀದ್ ನಹೀಮಿ ಬೆಂಗಳೂರು  ಇವರುಗಳು ಕೌಶಲ್ಯಾಭಿವೃದ್ದಿಯ ಮತ್ತು ವೃತ್ತಿ ತರಬೇತಿ ನೀಡುವ ಅತ್ಯುತ್ತಮ ಸಂಸ್ಥೆ ಎಂಬ ಪ್ರಶಸ್ತಿಯನ್ನು ಸ್ವೀಕರಿಸಿದರು .

ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಸುಮಾರು 300 ಕ್ಕಿಂತಲೂ ಹೆಚ್ಚು ಸಂಸ್ಥೆಗಳು ನಾಮಿನೇಶನ್ ಸಲ್ಲಿಸಿದ್ದರು. ಬೆಳ್ತಂಗಡಿಯ ಅನುಗ್ರಹ ಎಜುಕೇಶನ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್   ಇದರ ಅಂಗ ಸಂಸ್ಥೆಗಳಲ್ಲಿ ಮತ್ತು ಕಾರ್ಯಚಟುವಟಿಕೆಗಳಲ್ಲಿ ಒಂದಾದಾದ ಅನುಗ್ರಹ ಟ್ರೈನಿಂಗ್ ಕಾಲೇಜು ಮತ್ತು ಟ್ರಸ್ಟ್ ಮೂಲಕ ಕಳೆದ ನಾಲ್ಕೈದು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ಮೊಟ್ಟಮೊದಲನೆಯದಾಗಿ ಫ್ಯಾಶನ್ ಡಿಸೈನ್ ತರಬೇತಿ, ಬೇರೆ ಬೇರೆ ತಾಂತ್ರಿಕ, ವೃತ್ತಿ, ಸ್ವಉದ್ಯೋಗ, ಮತ್ತು ಕೌಶಲ್ಯಾಭಿವೃದ್ದಿ ತರಬೇತಿಗಳಲ್ಲಿ ಅಲ್ಪಾವಧಿ ಮತ್ತು ಧೀರ್ಗಾವಧಿ ತರಬೆತಿಗಳನ್ನು ಯಶಸ್ವಿಯಾಗಿ ನೀಡಿ ಯುವ ಸಮೂಹವನ್ನು ಉದ್ಯೋಗಿಗಳನ್ನಾಗಿ ಮಾಡುವ ಉತ್ತಮ ಕಾರ್ಯ ಅನುಗ್ರಹ ಸಂಸ್ಥೆಯಲ್ಲಿ ಆಗುತ್ತಿದೆ. ಇದಕ್ಕೆ ಸಂಬಧಿಸಿದ ಎಲ್ಲಾ ದಾಖಲೆಗಳನ್ನು ನಾಮಿನೇಶನ್ ಮೂಲಕ ಸಲ್ಲಿಸಲಾಗಿತ್ತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹೆಝ್ ಸಂಸ್ಥೆಯ ಅಧ್ಯಕ್ಷ ಡಾ|ಮಮ್ಮುಗಟ್ಟಿ , ಬ್ಯಾಂಕಾಕ್ ನ ನರುಲ ಅಕಾಡೆಮಿ ಅಧ್ಯಕ್ಷ  ಪೌಲ್ ಪೋರ್ನ್ ತ್ಯಾಪ್, ಮಲೇಶಿಯದ ನ್ಯಾಚುರಲ್ ಸಯಿನ್ಸ್ ಫವುಂಡರ್ ಪಿ ಅಲ್ಥಾ ಝಾಂಬ್ರೆ, ಹಾಗೂ ಹಲವಾರು ಸಂಸ್ಥೆಗಳ ಮುಖಂಡರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.