ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಳೆಂಜ: ಕಳೆಂಜ ಗ್ರಾಮದ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ಶಾಸಕ ಹರೀಶ್ ಪೂಂಜ ನ.26 ರಂದು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಚುನಾವಣಾ ಪೂರ್ವದಲ್ಲಿ ಕಳೆಂಜದ ಬಿಜೆಪಿ ಕಾರ್ಯಕರ್ತರು ಹರೀಶ್ ಪೂಂಜರವರ ಗೆಲುವಿಗಾಗಿ ಶ್ರೀದೇವರಲ್ಲಿ ಹರಸಿಕೊಂಡಿದ್ದ 108 ಸಿಯಾಳಭೀಷೇಕದ ಅರ್ಚನೆಯ ಹರಕೆಯನ್ನು ಈ ಸಂದರ್ಭದಲ್ಲಿ ಈಡೇರಿಸಲಾಯಿತು.  ನಂತರ ದೇವಸ್ಥಾನದ ಆಡಳಿತ ಮಂಡಳಿಯಿಂದ, ಆಡಳಿತ ಮಂಡಳಿಯ ಅಧ್ಯಕ್ಷ ಅರವಿಂದ ಕುಡ್ವ ಮಿತ್ತಪಿತ್ತಿಲು ರವರು ಶಾಸಕರನ್ನು ಶಾಲು ಹೋದಿಸಿ, ಫಲಪುಷ್ಪಗಳನ್ನು ನೀಡಿ ಸನ್ಮಾನಿಸಿದರು.

  ಶಾಸಕರು ಸನ್ಮಾನ ಸ್ವೀಕರಿಸಿ ಮಾತನಾಡಿ, ಅತೀ ಹೆಚ್ಚು ಕಾರ್ಯಕರ್ತರನ್ನೊಳಗೊಂಡ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ವಾರ್ಡ್ ಗಳಲ್ಲಿಯೂ ಬಿಜೆಪಿಗೆ ಬಹುಮತ ನೀಡಿದ ಕಳೆಂಜದ ಬಿಜೆಪಿ ಮತದಾರ ಬಂಧುಗಳಿಗೆ ಧನ್ಯವಾದಗಳನ್ನು ಕೋರುತ್ತಾ, ಗ್ರಾ ಮದ ಬಹುವರ್ಷಗಳ ಸಮಸ್ಯೆಗಳಾದ ರಸ್ತೆ ಡಾಮಾರೀಕರಣ ಹಾಗೂ ಮೊಬೈಲ್ ಟವರನ್ನು ಆದಷ್ಟು ಬೇಗ ಮಾಡುವ ಭರವಸೆ ನೀಡಿದರು. ದೇವಸ್ಥಾನದ ನೂತನ ಸಭಾಭವನದ ಕಾಮಗಾರಿಗೆ ಶಾಸಕರ ಹಾಗೂ ಸಂಸದರ ನಿಧಿಯಿಂದ ರೂ.5ಲಕ್ಷ ಮಂಜೂರು ಮಾಡುವುಗಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶಾರದ, ಗ್ರಾ.ಪಂ.ಸದಸ್ಯ ಧನಂಜಯ ಗೌಡ, ಕಳೆಂಜ ಬಿಜೆಪಿ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಬಾಲಣ್ಣ ಗೌಡ, ಗ್ರಾ.ಪಂ.ಸದಸ್ಯರಾದ ಕೃಷ್ಣಮ್ಮ ಕಾಯಡ ಹಾಗೂ ಪ್ರವೀಣ್ ಕುಮಾರ್ ಬಟ್ಯಾಲ್ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.  ರಮೇಶ್ ರಾವ್ ಕಾಯಡ  ಸ್ವಾಗತಿಸಿ, ಧನ್ಯವಾದವಿತ್ತರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.