ಮಡಂತ್ಯಾರು: ಶ್ರೇಯಸ್ ರವರಿಗೆ ಕರಾಟೆ ಚಾಂಪಿಯನ್ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು: ಗೋಶಿನ್-ರ್‍ಯೂ ಕರಾಟೆ -ಡೋ ಅಸೋಸಿಯೇಷನ್ ಆಫ್ ಕರ್ನಾಟಕ ಸಂಸ್ಥೆಯ ಅಧೀನದಲ್ಲಿರುವ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯಾ ಕರಾಟೆ ಆಯೋಜಿಸಿದ ರಾಜ್ಯಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ -2018 ಮುಲ್ಕಿಯ ಪುತ್ರನ್ ಸಭಾಭವನದಲ್ಲಿ ನಡೆಯಿತು.
ಪುಂಜಾಲಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಉನ್ನತೀಕರಿಸಿದ 3 ನೇ ತರಗತಿಯ ಶ್ರೇಯಸ್ ಪೂಜಾರಿ ಯವರು ಹುಡುಗರ 9ವರ್ಷ ವಯೋಮಿತಿಯಲ್ಲಿ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ, ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಟ್ರೋಪಿ ಹಾಗೂ ಪ್ರಮಾಣ ಪತ್ರ ಪಡೆದಿರುತ್ತಾರೆ.
ಇವರು ಇನ್‌ಸ್ಟಿಟ್ಯೂಟ್ ಆಫ್ ಆರ್ ವಿ ಟೈಗರ್ ಮಾರ್ಷಲ್ ಆರ್ಟ್ಸ್ ಮಂಗಳೂರು ಸಂಸ್ಥೆಯ ಮಡಂತ್ಯಾರು ಶಾಖೆಯ ಸದಸ್ಯರಾಗಿದ್ದು, ಸೆನ್ಸಾಯಿ ವಸಂತ.ಕೆ.ಬಂಗೇರ ರವರ ಶಿಷ್ಯರಾಗಿರುತ್ತಾರೆ. ಇವರು ಮಡಂತ್ಯಾರು ಶ್ರೀಮತಿ ಶಕುಂತಳಾ ಮತ್ತು ಯೋಗೀಶ್ ಪೂಜಾರಿ ದಂಪತಿ ಪುತ್ರ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.