ಗ್ರಾಮ ಪಂಚಾಯತು ಮಿತ್ತಬಾಗಿಲು: ಮಕ್ಕಳ ಗ್ರಾಮ ಸಭೆ

ಮಿತ್ತಬಾಗಿಲು: ಮಿತ್ತಬಾಗಿಲು ಗ್ರಾಮ ಪಂಚಾಯತು ವ್ಯಾಪ್ತಿಯ ಎಲ್ಲಾ ಶಾಲಾ ವಿದ್ಯಾರ್ಥಿಗಳ, ಹೆತ್ತವರ ಮಕ್ಕಳ ಗ್ರಾಮಸಭೆಯು ಕು| ಸಪ್ನ ಜಿ. ಇವರ ಅಧ್ಯಕ್ಷತೆಯಲ್ಲಿ ಅ.23 ರಂದು ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಕಲಾ ಮಂದಿರದಲಿ ಜರಗಿತು. ಗ್ರಾ.ಪಂ ಅಧ್ಯಕ್ಷ ನಾರಾಯಣ ಪಾಟಾಳಿ, ಉಪಾಧ್ಯಕ್ಷೆ ಶ್ರೀಮತಿ ವನಿತಾ ಹಾಗೂ ಪಂಚಾಯತು ಸದಸ್ಯರು, ಪಂ.ಅಭಿವೃದ್ಧಿ ಅಧಿಕಾರಿ ದೇವರಾಜೇ ಗೌಡ, ಕಾರ್ಯದರ್ಶಿ ಮಾರುತಿ ಬಿ.ಹೆಚ್, ಹಾಗೂ ಪಂ. ಸಿಬ್ಬಂದಿಗಳು ಗ್ರಾಮ ಸಭೆಯಲ್ಲಿ ಉಪಸ್ಥಿತರಿದ್ದರು.
ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಬಹಳ ಉಪಯುಕ್ತ ಬೇಡಿಕೆಗಳನ್ನು ಗ್ರಾಮಸಭೆಯಲ್ಲಿ ಮಂಡಿಸಿದರು. ಇದಕ್ಕಾಗಿ ಪಂಚಾಯತು ಅಧ್ಯಕ್ಷ ಬಹಳ ಮುತುವರ್ಜಿಯಿಂದ ಖಡ್ಡಾಯವಾಗಿ ವಿದ್ಯಾರ್ಥಿಗಳು ಭಾಗವಹಿಸಿ, ಮಕ್ಕಳಿಗೆ ತೋಚಿದ ಪ್ರಶ್ನೆಗಳನ್ನು ಮಂಡಿಸುವುದಕ್ಕಾಗಿ ಅವಕಾಶ ಮಾಡಿಕೊಟ್ಟಿದ್ದರು.
ಶಾಲಾ ಅಧ್ಯಾಪಕರಿಗೆ ಖಡಕ್ಕಾಗಿ ಅಧ್ಯಕ್ಷರು ಸಂದೇಶ ಕೊಟ್ಟು, ಯಾರೂ ಅಧ್ಯಾಪಕರು ಪ್ರಶ್ನೆಗಳನ್ನು ಬರೆದು ಕೊಡಬಾರದು. ಮಕ್ಕಳನ್ನು ಅವರ ಪಾಡಿಗೆ ಬಿಟ್ಟು, ಮಕ್ಕಳಿಗೆ ಬೇಕಾದ ಪ್ರಶ್ನೆಗಳನ್ನು ಕೇಳುವುದಕ್ಕಾಗಿ ಅವಕಾಶ ಮಾಡಿಕೊಟ್ಟು ಒಂದು ಮಾದರಿ ಮಕ್ಕಳ ಗ್ರಾಮ ಸಭೆಯನ್ನಾಗಿ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದರೂ. ತಾಲೂಕು ಪಂಚಾಯತು ವತಿಯಿಂದ ಜಯಾನಂದ ಲಾಲ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಬಹಳ ಅದ್ಭುತ ರೀತಿಯಲ್ಲಿ ಸಭೆಯನ್ನು ನಡೆಸಿಕೊಟ್ಟರು.
ಮಕ್ಕಳ ಗ್ರಾಮಸಭೆಯಲ್ಲಿ ಕೊಲ್ಲಿ ಅಂಗನವಾಡಿ ಕೇಂದ್ರದ ಅಡುಗೆ ಗ್ರೈಂಡರ್ ಮತ್ತು ೭ ಊಟದ ತಟ್ಟೆ ಕಾಣೆಯಾಗಿದೆ. ಬದಲಿಗೆ ಚಲಾವಣೆ ಆಗದ ಗ್ರೈಂಡರ್ ಆ ಜಾಗಕ್ಕೆ ತಂದು ಇಡಲಾಗಿದೆ ಎಂದು ಮಕ್ಕಳ ಪೋಷಕರು ಆರೋಪಿಸಿದರು. ಇದನ್ನೂ ತಕ್ಷಣ ಪತ್ತೆ ಹಚ್ಚಿ ಎಂದು ಗ್ರಾಮಸಭೆಯಲ್ಲಿ ಬೇಡಿಕೆ ಇಟ್ಟ ಘಟನೆಯೂ ನಡೆಯಿತು. ಇಲಾಖೆಯಿಂದ ನ್ಯಾಯ ಕೊಡಿಸಿ ಎಂದರು.

ಮಕ್ಕಳ ಬೇಡಿಕೆಗೆ ಪಂ. ಅಧ್ಯಕ್ಷ ನಾರಾಯಣ ಪಾಟಾಳಿ ಮಾಲಾಡಿ ಮಕ್ಕಳ ಬೇಡಿಕೆಗೆ ಪಂಚಾಯತು ಕಾರ್ಯವ್ಯಾಪ್ತಿಯ ಒಳಗೆ ಬರುವುದಕ್ಕೆಲ್ಲಾ ಸಹಕರ ನೀಡುತ್ತೇನೆ. ಶಾಲಾ ಆವರಣ ಗೋಡೆ, ಇತ್ಯಾದಿ ಬೇಡಿಕೆ ಒಳಗೆ ಬರುವುದಕ್ಕೆಲ್ಲಾ ಸಹಕಾರ ನೀಡುತ್ತೇನೆ. ಶಾಲಾ ಆವರಣ ಗೋಡೆ, ಇತ್ಯಾದಿ ಬೇಡಿಕೆ ಇತ್ತು. ಅಂಗನವಾಡಿ ಕೇಂದ್ರ ಗ್ರೈಂಡರ್, ತಟ್ಟೆಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮದ ಭರವಸೆ ಕೊಟ್ಟರು. ಶಿಕ್ಷಣ, ಆರೋಗ್ಯ, ಶಿಶು ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆಗಳಿಂದ ಉಪಯುಕ್ತ ಮಾಹಿತಿ ನೀಡಲಾಯಿತು. ಮಕ್ಕಳ ಆರೋಗ್ಯ, ಹೆಣ್ಣು ಮಕ್ಕಳ ಪೋಷಣೆ, ಇತ್ಯಾದಿ ವಿಷಯಗಳು ಪ್ರಾಸ್ತಾಪಗೊಂಡವು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.