ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರು: ಪವಿತ್ರ ಧ್ಯಾನಗುಹೆಯನ್ನು ಲೋಕಾರ್ಪಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು: ಶಿಕ್ಷಣವೆಂದರೆ ಕೇವಲ ಬರೆಯುವುದು, ಓದುವುದು, ಹೇಳುವುದು ಮಾತ್ರವಲ್ಲ, ಜ್ಞಾನ, ಕೌಶಲ್ಯ ಮತ್ತು ಮಾಲ್ಯಗಳನ್ನು ತುಂಬುವ ಸುಂದರ ವ್ಯವಸ್ಥೆಯಾಗಿದೆ. ವಿದ್ಯಾ ಸಂಸ್ಥೆಗಳು ಸಮಾಜದ ಅಭಿವೃದ್ಧಿಯಲ್ಲಿ ಮಹತ್ತರವಾದ ಪಾತ್ರ ವಹಿಸುತ್ತವೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಜನೆಗೈದ ವಿದ್ಯಾರ್ಥಿಗಳು ತನಗೆ ಬದುಕು ನೀಡಿದ ವಿದ್ಯಾಸಂಸ್ಥೆಗಳನ್ನು ಸದಾ ಪ್ರೀತಿಸಬೇಕೆಂದು ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯದ ಬಿಷಪರಾದ ಅತೀ ವಂದನೀಯ ಬಿಷಪ್ ಡಾ| ಪೀಟರ್ ಪೌಲ್ ಸಲ್ಡಾನ ಕರೆ ನೀಡಿದರು. ಅವರು ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆ ಹಾಗೂ ಸೇಕ್ರೆಡ್ ಹಾರ್ಟ್ ದೇವಾಲಯದ ಆಡಳಿತ ಮಂಡಳಿಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯದ 14 ನೇ ಬಿಷಪ್‌ರಾಗಿ ಪಟ್ಟಾಭಿಷಕ್ತರಾದ ಬಳಿಕ ಪ್ರಥಮ ಬಾರಿಗೆ ಮಡಂತ್ಯಾರು ಚರ್ಚ್‌ಗೆ ಭೇಟಿ ನೀಡಿದ ಇವರು ಸಿನಡ್ಯಾಲಿಟಿ’ ಅಂದರೆ ಒಟ್ಟಾಗಿ ಸೇರಿ ಸೇವೆ ಮಾಡುವ ಎಂಬ ಮಾತಿನ ಪ್ರಕಾರ ಇಗರ್ಜಿಯ ಹಾಗೂ ವಿದ್ಯಾಸಂಸ್ಥೆಗಳ ಅವಶ್ಯಕತೆಗಳ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರುವ ವಿಚಾರದಂತೆ ಸದಸ್ಯರಲ್ಲಿ ಚರ್ಚಿಸಿದರು. ಮಡಂತ್ಯಾರಿನಲ್ಲಿ ಸುಮಾರು 4000 ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆಯಿಂದ ಪದವಿಯವರೆಗೆ ಶಿಕ್ಷಣ ಪಡೆಯುತ್ತಿದ್ದಾರೆ. ಸುಮಾರು 800 ಕ್ರಿಸ್ತ ಕುಟುಂಬಗಳ 3500 ಕ್ರೈಸ್ತರು ಹೊಂದಿರುವ ಈ ಇಗರ್ಜಿಯಲ್ಲಿ 11 ಸಂಘ ಸಂಸ್ಥೆಗಳು, 22 ವಾಳೆಗಳ ಮೂಲಕ ಮಡಂತ್ಯಾರು ಧರ್ಮಕೇಂದ್ರದ ಹಾಗೂ ಊರಿನ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದಕ್ಕೆ ಬಿಷಪ್‌ರು ಅಭಿನಂದನೆ ಸಲ್ಲಿಸಿದರು.

ಇವರನ್ನು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ವಿಶೇಷ ಮೆರವಣಿಗೆಯಲ್ಲಿ ಸ್ವಾಗತಿಸಿ ಬಳಿಕ ಸೇಕ್ರೆಡ್ ಹಾರ್ಟ್ ದೇವಾಲಯದಲ್ಲಿ ದಿವ್ಯ ಬಲಿಪೂಜೆಯನ್ನು ಸಮರ್ಪಿಸಿದರು. ಇದೇ ವೇಳೆ ಇಗರ್ಜಿಯ ಮುಂಭಾಗದಲ್ಲಿ ಸ್ಥಾಪಿಸಿದ ಶ್ರೀ ಪ್ರಭು ಏಸುವಿನ ಶ್ರೈನ್ ಮತ್ತು ಪ್ರಭು ಏಸುವಿನ ಮಹಿಮೆ ಸಾರುವ ಬೈಬಲ್ ಆಧಾರಿತ ವಿಚಾರಧಾರೆಗಳ ನೈಜ ಚಿತ್ರಣವನ್ನು ಬಿಂಬಿಸುವ ವಿಶಿಷ್ಟವಾದ ರೀತಿಯಲ್ಲಿ ನಿರ್ಮಾಣಗೊಂಡ ಪವಿತ್ರ ಧ್ಯಾನಗುಹೆಯನ್ನು ಲೋಕಾರ್ಪಣೆಗೈದರು.

 ಸೇಕ್ರೆಡ್ ಹಾರ್ಟ್ ಇಗರ್ಜಿ ಹಾಗೂ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೆ|ಫಾ| ಬಾಸಿಲ್ ವಾಸ್, ಸಹಾಯಕ ಧರ್ಮಗುರುಗಳಾದ ರೆ| ಫಾ| ಆಲ್ವಿನ್ ರಿಚಾರ್ಡ್ ಡಿ’ಸೋಜಾ, ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ  ರೆ|ಫಾ| ಜೆರೋಮ್ ಡಿ’ಸೋಜಾ, ಹಾಗೂ ನಿಯೋಜಿತ ಧರ್ಮಗುರುಗಳಾದ ರೆ|ಫಾ| ಆಲ್ವಿನ್ ಡಿ’ಸೋಜ, ಉಪಾಧ್ಯಕ್ಷ   ರೊನಾಲ್ಡ್ ಸಿಕ್ವೇರಾ, ಕಾರ್ಯದರ್ಶಿ ಲಿಯೋ ರೊಡ್ರಿಗಸ್ ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಚಾರ್ಯರಾದ ಅಲೆಕ್ಸ್ ಐವನ್ ಸಿಕ್ವೇರಾ, ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜೆಸಿಂತಾ ಪಿಂಟೋ, ಗಾರ್ಡಿಯನ್ ಏಂಜಲ್ಸ್ ಹೈಯರ್ ಪ್ರೈಮರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಜೆಸಿಂತಾ ಲೋಬೊ, ಸಲೇಶಿಯನ್ ಸಿಸ್ಟರ್ಸ್ ಆಫ್ ಡಾನ್ ಬೋಸ್ಕೊ ಇದರ ಮುಖ್ಯಸ್ಥೆ ಸಿಸ್ಟರ್ ಪ್ರೇಮ ತೌರೊ, ಅರ್ಸುಲೈನ್ ಸಿಸ್ಟರ್ಸ್ ಮತ್ತು ಸೇಕ್ರೆಡ್ ಹಾರ್ಟ್ ಸ್ಟೂಡೆಂಟ್ ಹೋಮ್ ಇದರ ಮುಖ್ಯಸ್ಥೆ ಸಿಸ್ಟರ್ ಟ್ರೀಜಾ ಕ್ರಾಸ್ತ, ಆಶಾದೀಪ ಕರ್ಮಲೈಟ್ ಗುರುಗಳ ಮನೆಯ ಮುಖ್ಯಸ್ಥ ಫಾ| ಲ್ಯಾನ್ಸಿ ಲೂವಿಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಡಳಿತ ಮಂಡಳಿಯ ಸದಸ್ಯ  ವಿವೇಕ್ ವಿ. ಪಾಸ್ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.