ಹೆಗ್ಗಡೆಯವರ ಹುಟ್ಟುಹಬ್ಬ: ಮಡಂತ್ಯಾರು ಹಾಗೂ ಪುಂಜಾಲಕಟ್ಟೆ ಪೇಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

 ಮಡಂತ್ಯಾರು:  ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮ ದಿನದ ಪ್ರಯುಕ್ತ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಪಾದಯಾತ್ರೆಯ ಸಲುವಾಗಿ, ಮಡಂತ್ಯಾರು ಪೇಟೆಯಲ್ಲಿ ಮಡಂತ್ಯಾರು ಸೇವಾ ಸಹಕಾರಿ ಬ್ಯಾಂಕಿನಿಂದ- ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ವರೆಗೆ ಬೃಹತ್ ಸ್ವಚ್ಛತಾ ಕಾರ್ಯಕ್ರಮವನ್ನು, ಗ್ರಾಮ ಪಂಚಾಯಿತಿ ಮಡಂತ್ಯಾರು, ವರ್ತಕರ ಸಂಘ ಮಡಂತ್ಯಾರು, ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ ಪಾದಯಾತ್ರಾ ಸಮಿತಿ ಮಡಂತ್ಯಾರು, ಜೇಸಿಐ ಮಡಂತ್ಯಾರು, ಭಾರತೀಯ ಕೆಥೋಲಿಕ್ ಯುವ ಸಂಚಲನ ಮಡಂತ್ಯಾರು ಮತ್ತು ಕ್ರೈಸ್ತ ಯುವ ವಿದ್ಯಾರ್ಥಿ ಸಂಘಟನೆ ಮಡಂತ್ಯಾರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಬಿ. ಜಯಂತ ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಕೆ., ಸೇಕ್ರೆಡ್ ಹಾರ್ಟ್ ಚರ್ಚಿನ ಧರ್ಮಗುರುಗಳಾದ ರೆ|ಸ್ವಾಮಿ ಬೇಸಿಲ್ ವಾಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ, ಶಿಕ್ಷಕ ಧರಣೇಂದ್ರ ಕೆ. ಜೈನ್, ತಾ.ಪಂ ಸದಸ್ಯೆ ಶ್ರೀಮತಿ ವಸಂತಿ ಲಕ್ಷ್ಮಣ್, ಜೇಸಿ ಅಧ್ಯಕ್ಷ ನವೀನ್ ಕೋಡ್ಲಕ್ಕೆ, ಜನಜಾಗೃತಿ ವೇದಿಕೆ ಅಧ್ಯಕ್ಷ ಪುಷ್ಪರಾಜ್ ಜೈನ್, ಮಂತ್ಯಾರು ಗ್ರಾ.ಪಂ ಸದಸ್ಯರಾದ ಕಿಶೋರ್ ಕುಮಾರ್ ಶೆಟ್ಟಿ, ಕಾಂತಪ್ಪ ಗೌಡ, ಅಬ್ದುಲ್ ರಹಿಮಾನ್ ಪಡ್ಪು, ಶ್ರೀಮತಿ ಗೋಪಿ ನಾಯ್ಕ, ಶ್ರೀಮತಿ ಹೇಮಾವತಿ ಶೆಟ್ಟಿ, ಒಕ್ಕೂಟದ ಅಧ್ಯಕ್ಷ  ಹರೀಶ್ ಶೆಟ್ಟಿ, ಬಾಲಚಂದ್ರ ಹೆಗ್ಗಡೆ, ಧರ್ಣಪ್ಪ ಗೌಡ, ಕುಶಾಲಪ್ಪ, ಪದ್ಮಪ್ಪ ಗೌಡ, ಸಂಜೀವ ಪೂಜಾರಿ ಹಾಗೂ ಪ್ರಗತಿ ಬಂಧು ಸ್ವಸಹಾಯ, ಜ್ಞಾನವಿಕಾಸ ಕೇಂದ್ರದ ಸದಸ್ಯರುಗಳು ಹಾಗೂ ಸೇಕ್ರೆಡ್ ಹಾರ್ಟ್ ಚರ್ಚ್ನ ವಿದ್ಯಾರ್ಥಿಗಳು ಹಾಗು ಬಿ.ಸಿ.ಎಂ. ಹಾಸ್ಟೆಲ್ನ ವಿದ್ಯಾರ್ಥಿಗಳು ಸುಮಾರು 250 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ, ಮಡಂತ್ಯಾರ್ ವಲಯದ ನಾಗರಿಕ ಬಂಧುಗಳು, ಯೋಜನೆಯ ಸ್ವಚ್ಛತಾ ಸೇನಾನಿಗಳಾದ ಶ್ರೀಮತಿ ಕುಸುಮಾವತಿ,  ಹರ್ಷಕುಮಾರ್, ಹಾಗೂ ಸೇವಾ ಪ್ರತಿನಿಧಿಗಳಾದ ಶ್ರೀಮತಿ ಹರಿಣಾಕ್ಷಿ, ಶೋಭಾ, ಕಲಾವತಿ, ಜಯಲಕ್ಷ್ಮಿ, ಕು ರಂಜಿನಿ, ದೇವಪ್ಪ ರವರು ಹಾಗೂ ಮಡಂತ್ಯಾರು ಗ್ರಾಮ ಪಂಚಾಯಿತಿ ಸಿಬ್ಬಂದಿವರ್ಗ ಬೃಹತ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕು ಸ್ವಾತಿ ಪ್ರಾರ್ಥಿಸಿ,, ವಲಯ ಮೇಲ್ವಿಚಾರಕ ಸಚಿನ್  ಸ್ವಾಗತಿಸಿ, ಗ್ರಾ.ಪಂ ಸದಸ್ಯ ಕಾಂತಪ್ಪ ಗೌಡ ಧನ್ಯವಾದವಿತ್ತರು. ತುಳಸಿದಾಸ್ ಪೈ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.