ನಾರಾವಿ: ಜಯಂತ್ ಕೋಟ್ಯಾನ್ ರಿಗೆ ಅಭಿನಂದನೆ

ನಾರಾವಿ: ಜಯಂತ್ ಕೋಟ್ಯಾನ್ ಅಭಿಮಾನಿ ಬಳಗ ನಾರಾವಿ ಇದರ ವತಿಯಿಂದ ಬೆಳ್ತಂಗಡಿ ಬಿ.ಜೆ.ಪಿ ಮಂಡಲದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಯಂತ್ ಕೋಟ್ಯಾನ್ ಅವರಿಗೆ ಅಭಿನಂದನಾ ಕಾರ್ಯಕ್ರಮವು ನಾರಾವಿ ನವಜ್ಯೋತಿ ಸಭಾಭವನದಲ್ಲಿ ನಡೆಯಿತು.
ಜಯಂತ್ ಕೋಟ್ಯಾನ್ ರವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, “ತಾನು ಯಾವತ್ತೂ ಅಧಿಕಾರಕ್ಕಾಗಿ ಬಯಸಿದವನಲ್ಲ. ಪಕ್ಷದ ಹಿರಿಯರು, ಮುಖಂಡರು ನನ್ನ ಮೇಲೆ ವಿಶ್ವಾಸವಿರಿಸಿ ಪಕ್ಷದ ಅಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಿದ್ದು, ನನ್ನ ಮೇಲಿರುವ ಪ್ರೀತಿ,ವಿಶ್ವಾಸಕ್ಕೆ ಚಿರ ಋಣಿಯಾಗಿರುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿಸಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಹೇಳಿದರು.
ವೇದಿಕೆಯಲ್ಲಿ ನಾರಾವಿ ಗ್ರಾ.ಪಂ ಮಾಜಿ ಅಧ್ಯಕ್ಷ  ಡಾಕಯ್ಯ ಪೂಜಾರಿ, ಅಂಡಿಂಜೆ ಗ್ರಾ.ಪಂ ಅಧ್ಯಕ್ಷ ಮೋಹನ್ ಅಂಡಿಂಜೆ, ಬಜರಂಗದಳ ವೇಣೂರು ಪ್ರಖಂಡ ಸಂಚಾಲಕರಾದ ರಾಮ್ ಪ್ರಸಾದ್ ಮರೋಡಿ, ಪರಸ್ಪರ ಯುವಕ ಮಂಡಲದ ಅಧ್ಯಕ್ಷ ಗುರುಪ್ರಸಾದ್ ನಾರಾವಿ, ಗ್ರಾ.ಪಂ ಸದಸ್ಯ ರಾಜವರ್ಮ ಜೈನ್, ಬಿ.ಜೆ.ಪಿ ನಾರಾವಿ ಗ್ರಾಮ ಸಮಿತಿ ಅಧ್ಯಕ್ಷ ಉಮೇಶ್ ನಾರಾವಿ, ಬಜರಂಗದಳ ನಾರಾವಿ ಇದರ ಸಂಚಾಲಕ  ಮೋಹನ್ ಆಚಾರ್ಯ ಉಪಸ್ಥಿತರಿದ್ದರು.

ವಸಂತ್ ಆಚಾರ್ಯ ಸ್ವಾಗತಿಸಿ, ಬಿ.ಜೆ.ಪಿ ನಾರಾವಿ ಶಕ್ತಿ ಕೇಂದ್ರದ ಅಧ್ಯಕ್ಷ ಉದಯ್ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿದರು. ಸತೀಶ್ ಈದು ನಿರೂಪಿಸಿ, ವಿಜೇತ್ ದೇವಾಡಿಗ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.