ನೇತಾಜಿ ಕ್ರೀಡಾ ಸಂಘ ರಕ್ತೇಶ್ವರಿಪದವು: ಆಟೋಟ ಸ್ಪರ್ಧೆ, ಸಾಧಕರಿಗೆ ಸನ್ಮಾನ

ರಕ್ತೇಶ್ವರಿಪದವು: ಇಲ್ಲಿನ ನೇತಾಜಿ ಕ್ರೀಡಾ ಸಂಘದ ವಾರ್ಷಿಕೋತ್ಸವ ಹಾಗೂ ರಕ್ತೇಶ್ವರಿ ಪದವು ಪರಿಸರದ ಊರಿನ ಮಹಿಳೆಯರ ಹಾಗೂ ಪುರುಷರ ವಿವಿಧ ಅಟೋಟ ಸ್ಪರ್ಧಾ ಕಾರ್ಯಕ್ರಮವು  ಸರಕಾರಿ ಕಿ.ಪ್ರಾ.ಶಾಲಾ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಳಿಯ ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ನೇತಾಜಿ ಕ್ರೀಡಾ ಸಂಘದ ಅಧ್ಯಕ್ಷ ಸಿದ್ದಪ್ಪ ಗೌಡ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಾಳ ದೇವಸ್ಥಾನದ ವ್ಯವಸ್ಥಾನ ಸಮಿತಿ ಅಧ್ಯಕ್ಷ ವಸಂತ ಮಜಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಧಾರ್ಮಿಕ ಚಿಂತಕ, ಕಾಲೇಜು ಉಪನ್ಯಾಸಕ ಕೇಶವ ಬಂಗೇರ, ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ  ಜನಾರ್ದನ ಗೌಡ , ಕಳಿಯ ಗ್ರಾ.ಪಂ.ಸದಸ್ಯೆ ಮೋಹಿನಿ ಬಿ.ಗೌಡ,  ರಕ್ತೇಶ್ವರಿ ಪದವು ಶಾಲಾ ಎಸ್.ಡಿ.ಎಂ.ಅಧ್ಯಕ್ಷ ವಿಜಯ ಗೌಡ ಕೆ., ಸೈನಿಕ ವಿಕ್ರಂ ವಂಜಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕ್ರೀಡಾಪಟು ಕೆ.ಎಸ್.ಹರಿಪ್ರಸಾದ್ ಹಾಗೂ ನೇತಾಜಿ ಕ್ರೀಡಾ ಸಂಘದ ಗೌರವಾಧ್ಯಕ್ಷ   ದಿನೇಶ್ ಗೌಡ ಕೆ. ಇವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಕು|ಡಿ.ಎಂ.ದೀಕ್ಷಾ, ಕು|ಅಕ್ಷತಾ, ಚರಣ್ ಕುಮಾರ್ ಇವರುಗಳನ್ನು ಅಭಿನಂದಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು.

 ಗೀತಾ ಸಂಜೀವ್ ಗೌಡ, ಅಶಾಕಾರ್ಯಕರ್ತೆ ಶಶಿಕಲಾ ಓಬಯ್ಯಗೌಡ, ಆನಂದ ಗೌಡ, ವಿವೇಕ್ ಬಂಗೇರ ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಯೋಗೀಶ್ ಗೌಡ ವರದಿ ವಾಚಿಸಿ, ಕು|ದೀಕ್ಷಾ ಡಿ. ಎಂ. ಸ್ವಾಗತಿಸಿ, ಅಜೇಯ್ ಕುಮಾರ್ ಧನ್ಯವಾದವಿತ್ತರು. ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರ್ವಹಿಸಿದರು. ನೇತಾಜಿ ಕ್ರೀಡಾ ಸಂಘ ಇದರ ಕಟ್ಟಡ ನಿರ್ಮಾಣದ ಸಹಾಯಾರ್ಥವಾಗಿ ರಜತಚಂದ್ರ ಶ್ರೀ ಚಂದ್ರಶೇಖರ ಧರ್ಮಸ್ಥಳ ಇವರ ಸಾರಥ್ಯದಲ್ಲಿ ” ರಾವಣ ಗರ್ವ ಭಂಗ – ಭಾರ್ಗವ ವಿಜಯ” ಯಕ್ಷಗಾನ ಬಯಲಾಟ ರಾತ್ರಿ ಜರುಗಿತು.

                                                                                                                                                                 ವರದಿ: ಕೆ.ಎನ್.ಗೌಡ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.