ಬದಿನಡೆ ಶ್ರೀ ಸಪರಿವಾರ ಬ್ರಹ್ಮದೇವರ ದೇವಸ್ಥಾನದಲ್ಲಿ ಸಾರ್ವಜನಿಕ ಶನಿಶಾಂತಿ ಹೋಮ

ಬಳಂಜ: ಇಲ್ಲಿಯ ಬದಿನಡೆ ಶ್ರೀ ಸಪರಿವಾರ ಬ್ರಹ್ಮದೇವರ ದೇವಸ್ಥಾನದಲ್ಲಿ 8ನೇ ವರ್ಷದ ಸಾರ್ವಜನಿಕ ಶನಿಶಾಂತಿ ಹೋಮ ಮತ್ತು ಶನೈಶ್ವರ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ನ.24 ರಂದು ಜರುಗಿತು.
ಧಾರ್ಮಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡಂಗಡಿ ಗ್ರಾ.ಪಂ ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಬಂಗೇರ ಪೆರಾಜೆ ಧಾರ್ಮಿಕ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಅಳದಂಗಡಿ ತಾ.ಪಂ ಸದಸ್ಯೆ ಶ್ರೀಮತಿ ವಿನೂಷಾ ಪ್ರಕಾಶ್, ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್, ಪ್ರಗತಿಪರ ಕೃಷಿಕ ನಾರಾಯಣ ರಾವ್ ಕಾಪಿನಡ್ಕ, ಜೆಸಿಐ ಮಂಜುಶ್ರೀ ಬೆಳ್ತಂಗಡಿ ನಿಯೋಜಿತ ಅಧ್ಯಕ್ಷ ಪ್ರಶಾಂತ್ ಲಾಲ, ಸತೀಶ್ ರೈ ಬಾರ್‍ದಡ್ಕ, ವಿಶ್ವನಾಥ ಹೊಳ್ಳ, ಬಳಂಜ ಗ್ರಾ.ಪಂ ಸದಸ್ಯ ಯಶೋಧರ ಶೆಟ್ಟಿ ಅಟ್ಲಾಜೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಮೋಹನ್ ಬಿ.ಕೆ. ಬಳಂಜ ಮತ್ತು ನಾಟಿ ವೈದ್ಯರಾದ ಬೇಬಿ ಪೂಜಾರಿ ಪುಣ್ಕೆತ್ತಾರು ಪಿಲ್ಯ ಇವರನ್ನು ಸನ್ಮಾನಿಸಲಾಯಿತು.
ಸಂತೋಷ್ ಪಿ. ಕೋಟ್ಯಾನ್ ಸ್ವಾಗತಿಸಿ, ಸದಾನಂದ ಸಾಲಿಯಾನ್ ಪ್ರಸ್ತಾವಿಸಿದರು. ವಸಂತ ಗರ್ಡಾಡಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.