ಕಕ್ಕಿಂಜೆ: ಇಲ್ಲಿಯ ಯುವ ಇಸ್ಲಾಮಿಕ್ ವಿದ್ವಾಂಸ ಹಾಗೂ ವಾಗ್ಮಿ ಎಂಎಸ್ಎಂ ಅಬ್ದುರ್ರಶೀದ್ ಸಖಾಫಿ ಝೈನಿ ಕಾಮಿಲ್ ರವರು ಮಂಡಿಸಿದ “ಮೈಂಡ್ ಆಂಡ್ ಸ್ಪಿರಿಚ್ಯುವಾಲಿಟಿ-ಎ ಡಿಟೈಲ್ಡ್ ಸ್ಟಡೀ ಆಫ್ ಪವರ್ ಆಪ್ ಪ್ರೆಯರ್, ಟು ಎಲಿಮಿನೇಟ್ ದಿ ನೆಗೆಟೀವ್ ಮೆಂಟಲ್ ಆಟಿಟ್ಯೂಡ್ ಟು ಇಂಕ್ರೀಸ್ ದಿ ಲೆವಲ್ ಆಫ್ ಕಾನ್ಫಿಡೆನ್ಸ್ ಇನ್ ಟೇಕಿಂಗ್ ಆಫ್ ಚಾಲೆಂಜಸ್ ಇನ್ ಲೈಫ್” ಎಂಬ ಮಹಾ ಪ್ರಬಂಧಕ್ಕೆ ಪಿ.ಹೆಚ್.ಡಿ ಲಭಿಸಿದೆ.
ಮನಶಾಸ್ತ್ರಜ್ಞ ಹಾಗೂ ವಿವಿಧ ವಿಶ್ವವಿದ್ಯಾನಿಲಯಗಳ ರಿಸರ್ಚ್ ಗೈಡ್ ಆಗಿರುವ ಕೊಟ್ಟಯಂನ ಪ್ರೊ| ಆರ್.ಸುರೇಶ್ರವರ ಮಾರ್ಗದರ್ಶನದಲ್ಲಿ ಮಂಡಿಸಿದ ಈ ಮಹಾಪ್ರಬಂಧಕ್ಕೆ ಓಪನ್ ಇಂಟರ್ನ್ಯಾಷನಲ್ ಯುನಿವರ್ಸಿಟಿ ಫಾರ್ ಕಾಂಪ್ಲಿಮೆಂಟರಿ ಮೆಡಿಸಿನ್ ವಿಶ್ವವಿದ್ಯಾನಿಲಯವು ಪಿಹೆಚ್ಡಿ ಪದವಿಯನ್ನು ನೀಡಿದೆ.
ನ.25 ರಂದು ಶ್ರೀಲಂಕಾದ ಕೊಲಂಬೋನ ಬಂಡಾರನಾಯ್ಕೆ ಮೆಮೊರಿಯಲ್ ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಹಾಲ್ನಲ್ಲಿ ಜರಗುವ ಕಾರ್ಯಕ್ರಮದಲ್ಲಿ ಇವರು ಡಾಕ್ಟರೇಟ್ ಪದವಿ ಸ್ವೀಕರಿಸಲಿದ್ದಾರೆ.
ಅಬ್ದುರ್ರಶೀದ್ ಸಖಾಫಿ ಝೈನಿ ಕಾಮಿಲ್ರವರು ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತ್ತಕೋತ್ತರ ಪದವಿ ಪಡೆದು, ಅಂತರಾಷ್ಟ್ರೀಯ ಖ್ಯಾತಿಯ ಮನಶಕ್ತಿ ತರಬೇತುದಾರ ಡಾ| ಪಿ.ಪಿ ವಿಜಯನ್ ರವರಿಂದ ಮೈಂಡ್ ಮಾಸ್ಟರಿ, ಕೌನ್ಸೆಲಿಂಗ್ ಹಾಗೂ ಮೈಂಡ್ ಪವರ್ ಟ್ರೈನಿಂಗ್ನಲ್ಲಿ ವಿವಿಧ ಕೋರ್ಸ್ಗಳನ್ನು ಅಭ್ಯಾಸ ಮಾಡಿರುತ್ತಾರೆ. ಡಾ| ಆತ್ಮದಾಸ್ ಯಮಿಯವರಿಂದ ವಿವಿಧ ಮನಶಾಸ್ತ್ರೀಯ ಕೋರ್ಸ್ಗಳನ್ನು ಅಧ್ಯಯನ ಮಾಡಿರುತ್ತಾರೆ.
ಇವರು ಬೆಳ್ತಂಗಡಿಯ ಕಕ್ಕಿಂಜೆ ನಿವಾಸಿ, ಹಿರಿಯ ವಿದ್ವಾಂಸ ದಿ| ಎಂ.ಎಸ್ ಮೂಸ ಮುಸ್ಲಿಯಾರ್ ಹಾಗೂ ಆಸಿಯಾ ದಂಪತಿ ಪುತ್ರರಾಗಿದ್ದಾರೆ.