ಎಸ್.ಎಮ್.ಎ ಬೆಳ್ತಂಗಡಿ ರೀಜನಲ್ ನಿಂದ ಜಿಲ್ಲಾ ಸಮ್ಮೇಳನ ಪ್ರಚಾರಾರ್ಥ “ಲೀಡರ್ಸ್ ಮೀಟ್”

Advt_NewsUnder_1
Advt_NewsUnder_1

ಪರಪ್ಪು: ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ದಕ ಜಿಲ್ಲೆ ಪುತ್ತೂರು ವಿಭಾಗ ವತಿಯಿಂದ ಡಿಸೆಂಬರ್ 1 ರಂದು ಬೆಳ್ತಂಗಡಿಯಲ್ಲಿ ನಡೆಯುವ “ಜಿಲ್ಲಾ ಸಮ್ಮೇಳನ ಹಾಗೂ ಹುಬ್ಬುರ್ರಸೂಲ್ ಕಾನ್ಫರೆನ್ಸ್” ಪ್ರಚಾರಾರ್ಥ, ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಬೆಳ್ತಂಗಡಿ ವತಿಯಿಂದ ರೀಜನಲ್ ವ್ಯಾಪ್ತಿಯ ಮೊಹಲ್ಲಾಗಳ “ಲೀಡರ್ಸ್ ಮೀಟ್” ಸಮಾವೇಶವು, ಮರ್ಹೂಂ ಅಬ್ಬೋನು ಬದ್ಯಾರ್ ವೇದಿಕೆ ಮದ್ರಸಾ ಹಾಲ್ ಪರಪ್ಪು ನಲ್ಲಿ ನಡೆಯಿತು.
ರೀಜನಲ್ ಅಧ್ಯಕ್ಷರಾದ ಯಾಕೂಬ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು.ರೇಂಜ್ ಅಧ್ಯಕ್ಷರಾದ ಆದಂ ಮದನಿ ಎರುಕಡಪ್ಪು ಕಾರ್ಯಕ್ರಮ ಉದ್ಘಾಟಿಸಿದರು.
ಸ್ವಾಗತ ಸಮಿತಿ ಕನ್ವೀನರ್ ಮುಹಮ್ಮದ್ ಅಶ್ರಫ್ ಸಖಾಫಿ ಮಾಡಾವು ವಿಷಯ ಮಂಡಿಸಿದರು.ರೀಜನಲ್ ಪ್ರಧಾನ ಕಾರ್ಯದರ್ಶಿ ಎನ್.ಎಂ.ಶರೀಫ್ ಸಖಾಫಿ ಸ್ವಾಗತಿಸಿದರು.ವೇದಿಕೆಯಲ್ಲಿ ಸ್ಥಳೀಯ ಖತೀಬರಾದ ಉಮರುಲ್ ಫಾರೂಕ್ ಸಖಾಫಿ ,ಸ್ವಾಗತ ಸಮಿತಿ ಚೆಯರ್ಮೆನ್ ಎ.ಕೆ ಅಹಮದ್ ಎರುಕಡಪ್ಪು,ಅಬ್ದುರ್ರಹ್ಮಾನ್ ಬಾಖವಿ,ಝೋನ್ ಅಧ್ಯಕ್ಷ ಬದ್ರುದ್ದೀನ್ ಪರಪ್ಪು,ಉಸ್ಮಾನ್ ಬಳಂಜ,ಪರಪ್ಪು ಅಧ್ಯಕ್ಷ ಅಬ್ದುಲ್ ಬಶೀರ್ ಪರಪ್ಪು ಮೊದಲಾದವರು ಉಪಸ್ಥಿತರಿದ್ದರು. ವಿವಿಧ ಮೊಹಲ್ಲಾಗಳ ಹಲವು ಪ್ರತಿನಿಧಿಗಳು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.