ಚಾರ್ಮಾಡಿ: ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಗ್ರಾಮ ಸಮಿತಿ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

ಚಾರ್ಮಾಡಿ:   ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಗ್ರಾಮ ಸಮಿತಿ ಚಾರ್ಮಾಡಿ ಇದರ ಉದ್ಘಾಟನಾ ಕಾರ್ಯಕ್ರಮ ಹಾಗೂ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಮಾಹಿತಿ ಹಾಗೂ ನೋಂದಾವಣಾ ಕಾರ್ಯಾಗಾರವು ಚಾರ್ಮಾಡಿಯ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಜರುಗಿತು.

ಉದ್ಘಾಟನೆಯನ್ನು ಚಾರ್ಮಾಡಿ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ  ಪ್ರಕಾಶ್ ಹೊಸಮಠ ನೆರವೇರಿಸಿದರು.   ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು  ಕೃಷ್ಣ ರಾವ್ ಕೋಡಿತ್ತಿಲು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬಿಎಂಎಸ್  ರಾಜ್ಯಾಧ್ಯಕ್ಷ ಕೆ ವಿಶ್ವನಾಥ್ ಶೆಟ್ಟಿ, ಬಿಎಂಎಸ್  ಜಿಲ್ಲಾಧ್ಯಕ್ಷ   ಭಾಸ್ಕರ್ ರಾವ್, ಬಿಎಂಎಸ್ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ  ಉದಯ ಬಿಕೆ, ಬಿಎಂಎಸ್ ತಾಲೂಕು ಕಾರ್ಯಕಾರಣಿ ಬೆಳ್ತಂಗಡಿಯ ಸದಸ್ಯ  ವಿಜಯ ಜಿ ಅರಳಿ, ಗ್ರಾ.ಪಂ ಚಾರ್ಮಾಡಿ ಅಧ್ಯಕ್ಷೆ ಶ್ರೀಮತಿ ಶೈಲಜಾ, ಬಿಎಂಎಸ್ ಗ್ರಾಮ ಸಮಿತಿ ಅಧ್ಯಕ್ಷ ಸುಧೀರ್ ಎಂ.ಎನ್ ಹೊಸಮಠ, ಚಾರ್ಮಾಡಿ ವಿಶ್ವ ಹಿಂದೂ ಪರಿಷತ್  ಅಧ್ಯಕ್ಷ ದಯಾನಂದ್ ಪೊಂಗಾರ್ದಡಿ, ಚಾರ್ಮಾಡಿ ಮಾತೃ ಮಂಡಳಿ  ಅಧ್ಯಕ್ಷೆ ಶ್ರೀಮತಿ ಶಾರದಾ ಅಣಿಯೂರು, ಮೊಗೇರ ಸಂಘ ತಾಲೂಕು ಸಮಿತಿ ಸದಸ್ಯ ಆನಂದ ಮುಗೇರ  ಉಪಸ್ಥಿತರಿದ್ದರು.

 ಬಿಎಂಎಸ್ ನ ಉಪಾಧ್ಯಕ್ಷ  ಗಣೇಶ್ ಚಾರ್ಮಾಡಿ  ಸ್ವಾಗತಿಸಿ,  ಪ್ರದೀಪ್ ಅಂತರ ಧನ್ಯವಾದವಿತ್ತು, ಉಪಾಧ್ಯಕ್ಷ  ದಿ.ವಿನೇಶ್ ಕಾರ್ಯಕ್ರಮವನ್ನು ನಿರೂಪಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.