ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್‌ಗೆ ವಲಯ ಪ್ರಶಸ್ತಿಗಳು

ಬೆಳ್ತಂಗಡಿ: ಮಂಗಳೂರು ಸೀನಿಯರ್ ಛೇಂಬರ್‌ನ ಆಶ್ರಯದಲ್ಲಿ ಗುರುಪುರ ಕೈಕಂಬದಲ್ಲಿ ಇತ್ತೀಚೆಗೆ ಜರುಗಿದ ಭಾರತೀಯ ಸೀನಿಯರ್ ಛೇಂಬರ್‌ನ ವಲಯ 4ರ ಉತ್ಸವ-2018 ಸಮ್ಮೇಳನದಲ್ಲಿ ಬೆಳ್ತಂಗಡಿಯ ಮಂಜುಶ್ರೀ ಸೀನಿಯರ್ ಛೇಂಬರ್‌ಗೆ 5 ಪ್ರಶಸ್ತಿಗಳು ಲಭಿಸಿದೆ.
ದ.ಕ, ಕೊಡಗು, ಚಾಮರಾಜನಗರ, ಬೆಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಕೇರಳದ ಕಾಸರಗೋಡು, ಕಣ್ಣಾನೂರು, ಕಾಙಂಗಾಡ್ ಮುಂತಾದ 18 ಜಿಲ್ಲೆಗಳಲ್ಲಿರುವ ಸೀನಿಯರ್ ಛೇಂಬರ್ ಘಟಕಗಳನ್ನೊಳಗೊಂಡ ವಲಯ 4ರಲ್ಲಿ ಬೆಳ್ತಂಗಡಿಯ ಮಂಜುಶ್ರೀ ಸೀನಿಯರ್ ಛೇಂಬರ್‌ನ 14 ಸದಸ್ಯರುಗಳು ಭಾಗಿಯಾಗಿ ಈ ಪ್ರಶಸ್ತಿಗಳನ್ನು ಪಡೆದುಕೊಂಡರು.
ವಲಯ 4ರ ಅತ್ಯುತ್ತಮ ಘಟಕ ದ್ವಿತೀಯ, ಅತ್ಯುತ್ತಮ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ದ್ವಿತೀಯ, ಅತ್ಯುತ್ತಮ ಘಟಕಾಧ್ಯಕ್ಷ ದ್ವಿತೀಯ, ಅತೀ ಹೆಚ್ಚು ನೋಂದಾವಣೆ, ಅತ್ಯಧಿಕ ಕುಟುಂಬ ನೋಂದಾವಣೆ ಪ್ರಶಸ್ತಿಗಳೊಂದಿಗೆ ಅಧ್ಯಕ್ಷ ಡಾ| ಪ್ರಮೋದ್ ನಾಯಕ್ ವಿಶೇಷ ಬಹುಮಾನ ಪಡೆದರು. ಸಂಸ್ಥೆಯ ಸದಸ್ಯರಾದ ಲೋಕೇಶ್ ಶೆಟ್ಟಿ ಹಾಗೂ ಜೋನ್ ಅರ್ವಿನ್ ಡಿಸೋಜಾ ರವರು ನೆರೆದವರಿಗೆ ತಮ್ಮ ಹಾಡಿನ ಮೂಲಕ ಮನರಂಜನೆ ನೀಡಿದರು.
ಪೃಥ್ವಿರಂಜನ್ ರಾವ್, ವಾಲ್ಟರ್ ಸಿಕ್ವೇರಾ, ವಿಶ್ವನಾಥ ಶೆಟ್ಟಿ, ಗೋಪಾಲಕೃಷ್ಣ ಭಟ್, ವಿಶ್ವನಾಥ ಕೆ, ದುರ್ಗಾ, ಚಂದ್ರಹಾಸ ಕೇದೆ, ದಯಾನಂದ ಕೆ, ಜಯಶ್ರೀ ಪಿ. ನಾಯಕ್ ಮೊದಲಾದವರು ಭಾಗವಹಿಸಿದ್ದರು.
ರಾಷ್ಟ್ರೀಯ ಅಧ್ಯಕ್ಷ ಶಿವಾನಂದನ್, ವಲಯ 4ರ ರಾಷ್ಟ್ರೀಯ ಉಪಾಧ್ಯಕ್ಷ ಎಂ.ಆರ್ ಜಯೇಶ್, ರಾಷ್ಟ್ರೀಯ ನಿರ್ದೇಶಕ ಡಾ| ಅರವಿಂದ ಕೇದಗೆ ಹಾಗೂ ಭಾರತೀಯ ಸೀನಿಯರ್ ಛೇಂಬರ್‌ನ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.