ಪಡ್ಡಂದಡ್ಕ: ಶಾಲಾ ಭೋಜನಾಲಯ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು : ಇಲ್ಲಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಡ್ಡಂದಡ್ಕ ಇಲ್ಲಿ ದಾನಿಗಳ ನೆರವಿನಲ್ಲಿ ರೂ. 12 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಶ್ರೀಮತಿ ಪಾರ್ವತಿ ಕೇಶವ ಕಾರಂತ ಸುಸಜ್ಜಿತ ಶಾಲಾ ಭೋಜನಾಲಯದ ಉದ್ಘಾಟನಾ ಸಮಾರಂಭವು ನ.22 ರಂದು ಜರುಗಿತು.
ಭೋಜನಾಲಯದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿದರು. ಹೊಸಂಗಡಿ ಗ್ರಾ.ಪಂ ಅಧ್ಯಕ್ಷೆ ಹೇಮಾ ವಸಂತ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹೊಸಂಗಡಿ ತಾ.ಪಂ ಸದಸ್ಯ ಓಬಯ್ಯ ಆರಂಬೋಡಿ, ಹೊಸಂಗಡಿ ಗ್ರಾ.ಪಂ ಸದಸ್ಯರಾದ ಹರಿಪ್ರಸಾದ್ ಪಿ, ಗುಲಾಬಿ, ಹಿರಿಯರಾದ ಪಾರ್ವತಿ ಕೇಶವ ಕಾರಂತ, ದ.ಕ.ಜಿಲ್ಲಾ ಪ್ರಾ. ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಶಿವಶಂಕರ ಭಟ್, ತಾಲೂಕು ಅಧ್ಯಕ್ಷ ಪ್ರಭಾಕರ ನಾರಾವಿ, ಪಡ್ಡಂದಡ್ಕ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಅಧ್ಯಕ್ಷ ಗಂಗಾಧರ ಆಚಾರ್ಯ, ಪಡ್ಡಂದಡ್ಕ ಜುಮಾ ಮಸೀದಿ ಕಾರ್ಯದರ್ಶಿ ಮಹಮ್ಮದ್ ಶಾಫಿ, ಪಡ್ಡಂದಡ್ಕ ಶಾಲೆಯ ಮುಖ್ಯ ಶಿಕ್ಷಕಿ ಕಮಲಮ್ಮ ಎಂ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಎಂ ಕೋಯಾ ತಂಙಳ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಭೋಜನಾಲಯಕ್ಕೆ ವಿವಿಧ ರೀತಿಗಳಲ್ಲಿ ಸಹಕರಿಸಿದ ದಾನಿಗಳನ್ನು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರನ್ನು, ಅಕ್ಷರ ದಾಸೋಹ ಸಿಬ್ಬಂದಿಯನ್ನು ಶಾಲಾ ವತಿಯಿಂದ ಸನ್ಮಾಸಿನಲಾಯಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.