ಗುರುವಾಯನಕೆರೆ: ಯುವಕನಿಗೆ ಮಾರಣಾಂತಿಕ ಹಲ್ಲೆ

Advt_NewsUnder_1
Advt_NewsUnder_1

ಗುರುವಾಯನಕೆರೆ: ವ್ಯಕ್ತಿಯೋರ್ವನಿಗೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಗುರುವಾಯನಕೆರೆ ಗುಳಿಗನಕಟ್ಟೆ ಸಮೀಪ ರಸ್ತೆಬದಿಯಲ್ಲಿ ಹಾಕಿಹೋದ ಘಟನೆ ನ.21 ರಂದು ರಾತ್ರಿ ನಡೆದಿದೆ. ಗದಗ ಮೂಲದ ಸುರೇಶ್(27.ವ) ಹಲ್ಲೆಗೊಳಗಾದ ವ್ಯಕ್ತಿ.
ಸುರೇಶ್‌ರವರು ಮೂಲತಃ ಗದಗ ಜಿಲ್ಲೆಯ ನಿವಾಸಿಯಾಗಿದ್ದು, ಉಜಿರೆಯಲ್ಲಿ ಮೇಸ್ತ್ರಿಕೆಲಸ ಮಾಡುತ್ತಿದ್ದರು. ರಸ್ತೆಬದಿಯಲ್ಲಿ ಗಾಯಗೊಂಡು ಬಿದ್ದಿರುವ ಇವರನ್ನು ನ.22 ರಂದು ಬೆಳಿಗ್ಗೆ ಗಮನಿಸಿದ ಸ್ಥಳೀಯರು, ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈತನ ಮೇಲೆ ಹಲ್ಲೆನಡೆಸಿರುವವರು ಯಾರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.