ರೋಟರಿ ‘ಆಶಾ ಸ್ಪೂರ್ತಿ’ ಜಿಲ್ಲಾ ಯೋಜನೆಯಡಿ ಅಂಗನಾಡಿಗಳ ಅಭಿವೃದ್ಧಿ

ಬೆಳ್ತಂಗಡಿ: ವಿದ್ಯಾರ್ಥಿಗಳಿಗೆ ಎಳೆವಯಸ್ಸಿನಲ್ಲಿಯೇ ಉತ್ತಮ ಶಿಕ್ಷಣ ಲಭ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ದ.ಕ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಸುಮಾರು 7600 ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಲು ನಿರ್ಧರಿಸಲಾಗಿದೆ ಎಂದು ರೋಟರಿ ಜಿಲ್ಲೆ 3181ರ ಗವರ್ನರ್ ರೋಹಿನಾಥ್ ಪಿ ತಿಳಿಸಿದರು. ಅವರು ನ.22 ರಂದು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಅಂಗನವಾಡಿ ಕೇಂದ್ರಗಳಿಗೆ ಆದ್ಯತೆಯ ನೆಲೆಯಲ್ಲಿ ಶೌಚಗೃಹ, ಕುಡಿಯುವ ನೀರು, ಕಲಿಕಾ ಉಪಕರಣ ಸೌಲಭ್ಯ ಒದಗಿಸಲಾಗುತ್ತಿದೆ. ಬೆಳ್ತಂಗಡಿ ರೋಟರಿ ಕ್ಲಬ್ ತಾಲೂಕಿನ ಎಲ್ಲಾ 324 ಅಂಗನವಾಡಿ ಕೇಂದ್ರಗಳ ಸ್ಥಿತಿಗತಿಗಳನ್ನು ಸರ್ವೇ ಮಾಡಿ ವರದಿ ಸಿದ್ಧಪಡಿಸಿದೆ ಎಂದರು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಜಗದೀಶ್ ಪ್ರಸಾದ್ ಮಾತನಾಡಿ, ತಾಲೂಕಿನ 324 ಅಂಗನವಾಡಿ ಕೇಂದ್ರಗಳ ಸರ್ವೇ ವರದಿ ಬಿಡುಗಡೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ನೀಡುವ ಯೋಜನೆಗೆ ಚಾಲನೆ ನೀಡಲಾಗಿದೆ. ಜತೆಗೆ ಕಕ್ಕಿಂಜೆಯಲ್ಲಿ ಮನೆಗೆ ಸೋಲಾರ್ ಘಟಕ ಅಳವಡಿಕೆ, ನಿಡ್ಲೆಯ ಮನೆಯೊಂದಕ್ಕೆ, ಸೇವಾಧಾಮಕ್ಕೆ ಆರ್ಥಿಕ ನೆರವು, 150 ಜನರಿಗೆ ಉಚಿತ ಆರೋಗ್ಯ ಸೇವೆ, ಅರ್ಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಕ್ಯಾನ್ಸರ್ ಪೀಡಿತ ಮಕ್ಕಳಿಗೆ ವೈದ್ಯಕೀಯ ನೆರವು, ಕೃತಕ ಕಾಲು ಜೋಡಣೆ ಮೊದಲಾದ ಸಮಾಜಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಅಲ್ಲದೆ ಕೊಡಗಿನ ಸಂತ್ರಸ್ತರಿಗೆ ರೋಟರಿ ಸದಸ್ಯರ ಹಾಗೂ ಹಿತೈಷಿಗಳ ಸಹಯೋಗದಲ್ಲಿ 1.52 ಲಕ್ಷ ಮೌಲ್ಯದ ಬಟ್ಟೆ ಹಾಗೂ ದಿನಸಿವಸ್ತುಗಳನ್ನು ಒದಗಿಸಿದ್ದೇವೆ ಎಂದರು.
ರೋಟರಿ ಜಿಲ್ಲಾ ಸಹಾಯಕ ಗವರ್ನರ್ ರೊ.ಪ್ರಕಾಶ್ ಕಾರಂತ್, ಕಾರ್ಯದರ್ಶಿ ನಾರಾಯಣ ಹೆಗ್ಡೆ, ವಲಯ ಸೇನಾನಿ ರೊ.ಡಾ| ಸುಧೀರ್ ಪ್ರಭು, ರಾಜೇಂದ್ರ ಕಾಮತ್, ಜಗದೀಶ್ಚಂದ್ರ, ಟಿ.ಆರ್.ಎಫ್ ಚಯರ್‌ಮ್ಯಾನ್ ಎಂ.ವಿ ಭಟ್, ರೊ.ಅಬೂಬಕ್ಕರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.