ಅನುಗ್ರಹ ಟ್ರೈನಿಂಗ್ ಕಾಲೇಜು ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಅನುಗ್ರಹ ಸಮ್ಮಿಲನ: ಸನ್ಮಾನ

ಬೆಳ್ತಂಗಡಿ: ಕಳೆದ 4 ನಾಲ್ಕು ವರ್ಷಗಳಿಂದ ಬೆಳ್ತಂಗಡಿಯಲ್ಲಿ ಜನಪರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ತಾಲೂಕಿನ ಮೊತ್ತಮೊದಲ ಫ್ಯಾಶನ್ ಡಿಸೈನಿಂಗ್ ಕಾಲೇಜು ತೆರೆದಿರುವ ಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿ ‌ಇಂದು ಬೆಳ್ತಂಗಡಿ ನಗರದ ಬಸ್ಟ್ಯಾಂಡ್ ಎದುರಿನ ಅನುಗ್ರಹ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಅನುಗ್ರಹ ಟ್ರಸ್ಟ್ ಅಧ್ಯಕ್ಷ ತಲ್ಹತ್ ಎಂ.ಜಿ ಮಾತನಾಡಿ, ಅನೇಕ ಸವಾಲುಗಳನ್ನು ಎದುರಿಸಿ ಸಂಸ್ಥೆ ಈ ಮಟ್ಟಕ್ಕೆ ಬೆಳೆದು ನಿಂತಿದ್ದು ನಮ್ಮ ಮಹತ್ವಾಕಾಂಕ್ಷೆಯಂತೆ ಬೆಳ್ತಂಗಡಿ ನಗರದಲ್ಲಿ ಸ್ವಂತ ಕಟ್ಟಡ ಹೊಂದುತ್ತಿದೆ. ಈ ಸಂದರ್ಭ ಸಂಸ್ಥೆಯನ್ನು ಉದ್ಘಾಟಿಸಲು ನೀವೆಲ್ಲರೂ ಅರ್ಹರು ಎಂಬ ನೆಲೆಯಲ್ಲಿ ಎಲ್ಲರನ್ನೂ ಕರೆದು ಈ ಕಾರ್ಯಕ್ರಮವನ್ನು ಸ್ನೇಹಕೂಟವಾಗಿ ವಿಶಿಷ್ಟವಾಗಿ ಆಚರಿಸಲು ತೀರ್ಮಾನಿಸಲಾಯಿತು ಎಂದರು.
ಸನ್ಮಾನ;
ಕಾಲೇಜಿನ ಸ್ಥಾಪನೆಯಿಂದ ಇದುವರೆಗೆ ಸಲಹೆಗಾರರಾಗಿರುವ ಅಲ್ಫೋನ್ಸ್ ಫ್ರಾಂಕೋ, ಅಶ್ರಫ್ ಆಲಿಕುಂಞಿ ಮುಂಡಾಜೆ, ಚೇರ್ಮೆನ್ ರ ತಂದೆ‌ ಇಸುಬು, ಗುರುಗಳಾದ ರಾಮಚಂದ್ರ ಭಟ್ ಸವಣಾಲು, ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು.
ಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿ ಪ್ರಾಂಶುಪಾಲ ಜೈಸನ್ ಪಟ್ಟೇರಿಲ್, ಅನುಗ್ರಹ ಎಜುಕೇಶನ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಟ್ರಸ್ಟಿಗಳಾದ ಅಶ್ರಫ್ ಫೈಝಿ, ನ ಈಮಿ ಬೆಂಗಳೂರು, ಖಾಲಿದ್ ಮಂಗಳೂರು, ಮುನೀರಾ ಕೆ. ವೈ, ಮೊದಲಾದವರು ಉಪಸ್ಥಿತರಿದ್ದರು. ಎಲ್ಲರಿಗೂ ವೈಯಕ್ತಿಕ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ಸಹಭೋಜನ ಏರ್ಪಡಿಸಲಾಗಿತ್ತು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.