ಉಜಿರೆ: ಕರ್ನಾಟಕ ರಾಜ್ಯ ಶಿಕ್ಷಕರ ಸಂಘ ಶಿವಮೊಗ್ಗ ಜಿಲ್ಲೆ ಹಾಗೂ ಟ್ರೆಡಿಶನಲ್ ಶೋಟೋ ಕೈ ಕರಾಟೆ ಅಸೋಸಿಯೇಶನ್ ವತಿಯಿಂದ ನ.10 ಮತ್ತು 11 ರಂದು ಶಿವಮೊಗ್ಗದಲ್ಲಿ ಆಯೋಜಿಸಿದ್ದ 4ನೇ ರಾಜ್ಯಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ 19 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 55 ಕೆ.ಜಿ ಕುಮಿಟೆ ವಿಭಾಗದಲ್ಲಿ ಹಳೆಪೇಟೆಯ ನಾಗರಾಜ್ ಶೆಟ್ಟಿ ಪ್ರಥಮ ಸ್ಥಾನಗಳಿಸಿದ್ದಾರೆ. ಇವರು ಹಳೆಪೇಟೆಯ ಶೇಖರ ಶೆಟ್ಟಿ ಮತ್ತು ಜಯಂತಿ ದಂಪತಿ ಪುತ್ರರಾಗಿದ್ದು, ಉಜಿರೆಯ ಸೆನ್ಸಾಯಿ ಅಬ್ದುಲ್ ರೆಹಮಾನ್ ರವರಿಂದ ತರಬೇತಿ ಪಡೆದಿರುತ್ತಾರೆ.