HomePage_Banner_
HomePage_Banner_
HomePage_Banner_

ಬಿ.ಸಿ. ರೋಡು- ಕೊಟ್ಟಿಗೆಹಾರ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ : ಭೂ ಸ್ವಾಧೀನಕ್ಕೆ ಅಧಿಸೂಚನೆ

Advt_NewsUnder_1

ಬೆಳ್ತಂಗಡಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಇಲಾಖೆ ಇದರ ವತಿಯಿಂದ ರಾಷ್ಟ್ರೀಯ ಹೆದ್ದಾರಿ ನಂ. 73ರಲ್ಲಿ (ಹಳೆ ಸಂ.234) ಬಿ.ಸಿ. ರೋಡಿನಿಂದ ಕೊಟ್ಟಿಗೆಹಾರ ತನಕ ರಸ್ತೆಯನ್ನು ಕಿ.ಮೀ 19.800 ರಿಂದ ಕಿ.ಮೀ  75.709ರ ವರೆಗೆ 2 ಲೇನ್‌ಗಾಗಿ ಅಗಲಗೊಳಿಸಲು ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.
ಕೇಂದ್ರ ಸರಕಾರವು ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956ರ ಪ್ರಕಾರ ನಿಯಮ 3(ಎ)ರ ಉಪ ನಿಯಮ(1)ರಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಜಮೀನುಗಳನ್ನು ಭೂ ಸ್ವಾಧೀನಪಡಿಸಿಕೊಳ್ಳಲು ಆದೇಶ ಹೊರಡಿಸಲಾಗಿದೆ.
ಜಮೀನುಗಳ ಬಗ್ಗೆ ಭೂ ಮಾಲೀಕರು ಅಥವಾ ಯಾವುದೇ ರೀತಿಯ ಹಿತಾಸಕ್ತಿ ಉಳ್ಳವರು ಹಾಗೂ ಸಾರ್ವಜನಿಕರು 21 ದಿನಗಳ ಒಳಗಾಗಿ ಸೆಕ್ಷನ್ 3(ಸಿ)1ರಂತೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
ಆಕ್ಷೇಪಣೆಗಳನ್ನು ವಿಶೇಷ ಭೂ ಸ್ವಾಧೀನಾಧಿಕಾರಿಗಳು ಮತ್ತು ಸಕ್ಷಮ ಪ್ರಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿಗಳು 73, ಪಿಡಬ್ಲ್ಯೂಡಿ ಆವರಣ, ಕೆ.ಆರ್. ವೃತ್ತ ಬೆಂಗಳೂರು-01 ಇವರಿಗೆ ಲಿಖಿತವಾಗಿ ಸಕಾರಣಗಳೊಂದಿಗೆ ಸಲ್ಲಿಸಬೇಕು. ಸಕ್ಷಮ ಪ್ರಾಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದವರನ್ನು ಅಥವಾ ಅವರ ಪರ ವಕೀಲರನ್ನು ಅವರು ಸಲ್ಲಿಸಿದ ಆಕ್ಷೇಪಣೆಗಳ ಬಗ್ಗೆ ವಿಚಾರಣೆ ನಡೆಸಿ ಅಂತಿಮಗೊಳಿಸಲಿದ್ದಾರೆ.
ಕುಕ್ಕಳ ಗ್ರಾಮದಲ್ಲಿ ಸ.ನಂ. 9 ಮತ್ತು 42, ಮಾಲಾಡಿಯಲ್ಲಿ ಸ.ನಂ. 27, ಕುವೆಟ್ಟುನಲ್ಲಿ ಸ.ನಂ. 103, ಬೆಳ್ತಂಗಡಿಯಲ್ಲಿ ಸ.ನಂ. 58, 59, 60, 83ರಲ್ಲಿ, ಲಾಯಿಲದಲ್ಲಿ ಸ.ನಂ. 84 ರಲ್ಲಿ, ಉಜಿರೆಯಲ್ಲಿ ಸ.ನಂ.202 ಮತ್ತು 204 ರಲ್ಲಿ ಕಲ್ಮಂಜದಲ್ಲಿ ಸ.ನಂ. 189, 193, 194, 199 ರಲ್ಲಿ, ಮುಂಡಾಜೆಯಲ್ಲಿ ಸ.ನಂ. 5, 52, 58, 91, 101, 143, 144, 148, 150, 155, 190 ರಲ್ಲಿ, ಚಿಬಿದ್ರೆಯಲ್ಲಿ ಸ.ನಂ.76 ರಲ್ಲಿ, ಚಾರ್ಮಾಡಿಯಲ್ಲಿ ಸ.ನಂ 41, 53, 56, 58, 60, 127, 133, 141, 142, 143, 148, 149, 150, 158, 161, 162, 163 ರ ಜಮೀನುಗಳ ಸ್ವಲ್ಪ ಭಾಗಗಳು ಭೂ ಸ್ವಾಧೀನ ಪಟ್ಟಿಯಲ್ಲಿ ಸೇರಿದೆ.

Advt_NewsUnder_2
Advt_NewsUnder_2

About The Author

Related posts

1 Comment

  1. Harish Karinja from Navoor Belthangady

    ಕೇಂದ್ರ ಮತ್ತು ರಾಜ್ಯ ಸರಕಾರ ಒಟ್ಟು ಸೇರಿ ಆದಷ್ಟು ಬೇಗ ಬಿಸಿರೋಡ್ ಕೊಟ್ಟಿಗೆಹಾರ ರಸ್ತೆಯನ್ನು ನಾಲ್ಕು ಲೇನ್ ರಸ್ತೆಯನ್ನಾಗಿ ಮಾಡಲಿ

    Reply

Leave a Reply

Your email address will not be published. Required fields are marked *

Copy Protected by Chetan's WP-Copyprotect.