ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರಿಂದ ಈದ್-ಇ-ಮಿಲದ್ ಆಚರಣೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಫ ರವರ ಜನ್ಮ ದಿನಾಚರಣೆಯ ಅಂಗವಾಗಿ ತಾಲೂಕಿನೆಲ್ಲಡೆ ಸಮಸ್ತ ಮುಸ್ಲಿಂ ಬಾಂಧವರಿಂದ ಇಂದು ಈದ್-ಇ-ಮಿಲದ್ ಆಚರಣೆ  ವಿಜೃಂಭಣೆಯಿಂದ ಜರುಗಿತು.

ಮುಂಡಾಜೆ ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್, ಮಸ್ಲಕ್ ಸಮಿತಿ, ಎಸ್ಸೆಸ್ಸೆಫ್, ಎಸ್ ವೈ ಎಸ್ ಹಾಗೂ ಸುನ್ನೀ ಸಂಘಟನೆಗಳ ಸಹಕಾರದೊಂದಿಗೆ ಮೀಲಾದ್ ಕಾರ್ಯಕ್ರಮ ನಡೆಯಿತು.
ಸಮಿತಿ ಕಾರ್ಯ ಅಧ್ಯಕ್ಷ ಹಾಜಬ್ಬ, ಜಮಾಅತ್ ಅಧ್ಯಕ್ಷ ಅಬ್ದುಲ್ಲ ಧ್ವಜಾರೋಹಣಗೈದರು. ಇಬ್ರಾಹಿಂ ಸಖಾಫಿ ದುಆ ನೆರವೇರಿಸಿದರು. ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ಸ್ಥಾಪಕಾಧ್ಯಕ್ಷ ಅಶ್ರಫ್ ಆಲಿಕುಂಞಿ ಸ್ವಾಗತಿಸಿದರು.
ಸಮಿತಿ ಕಾರ್ಯದರ್ಶಿ ರಮ್ಲ ನೆಕ್ಕರೆ, ಪ್ರಮುಖರಾದ ಶಬೀರ್, ಅಬ್ದುಲ್ಲ ನೆಕ್ಕರೆ, ಹಮೀದ್ ನೆಕ್ಕರೆ,‌ಉಸ್ಮಾನ್ ಎಂ ಕೆ, ಕರೀಂ ಕೆ.ಎಸ್, ಅಯ್ಯೂಬ್ ಆಲಿಕುಂಞಿ, ಮುಹಮ್ಮದ್ ಜೈ ಭಾರತ್, ಕರೀಂ ಕುರುಡ್ಯ, ಆಸಿಫ್, ಮುಹಮ್ಮದ್, ಅಬೂಬಕ್ಕರ್ ಕೂಳೂರು, ಅಬುಸ್ವಾಲಿಹ್, ಲೆತೀಫ್, ಇಸ್ಮಾಯಿಲ್ ದರ್ಕಾಸ್, ಸಹಾಯಕ ಧರ್ಮ ಗುರು ಸಿದ್ದೀಕ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.


ಪದ್ಮುಂಜ: ಇಲ್ಲಿಯ ಖಲಂದರ್ ಷಾ ಜುಮ್ಮಾ ಮಸೀದಿಯ ಲ್ಲಿ 1493ನೇ ಈದ್ ಮೀಲಾದ್  ಪ್ರವಾದಿ ಪೈಗಂಬರ್ ಮುಹಮ್ಮದ್  ಮುಸ್ತಫ   ರವರ ಜನ್ಮ ದಿನಾಚರಣೆ ಎಸ್ ಎಸ್ಎಫ್ ಶಾಖಾಧ್ಯಕ್ಷರಾದ ಅಶ್ರಪ್ ಅಂತರ ರವರ ಅಧ್ಯಕ್ಷತೆಯಲ್ಲಿ ಜರಗುತು.


ಮುಹಿಯ್ಯುದ್ದೀನ್ ಜುಮ್ಮಾ ಮಸೀದಿ ಪಣಕಜೆಯಲ್ಲಿ ಬೃಹತ್ ಮಿಲಾದ್ ರ್‍ಯಾಲಿ


ನಿಡಿಗಲ್ ಬದ್ರಿಯಾ ಜುಮ್ಮಾ ಮಸ್ಜಿದ್ ವತಿಯಿಂದ  ಬೃಹತ್ ಮಿಲಾದ್ ರ್‍ಯಾಲಿ


ವೇಣೂರು ಪಡ್ಡಂದಡ್ಕ ಜುಮ್ಮಾಮಸೀದಿಯಲ್ಲಿ ಈದ್ ಮಿಲಾದ್ ಆಚರಣೆ


ಬಂಗೇರಕಟ್ಟೆ ಮಸೀದಿಯಲ್ಲಿ ಸಂಭ್ರಮದ ಈದ್ ಮಿಲದ್  ಆಚರಣೆ


ಗೇರುಕಟ್ಟೆ: ಪರಪ್ಪು ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಬೃಹತ್ ಮಿಲಾದ್ ರ್‍ಯಾಲಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.