ಡ್ಯಾನ್ಸ್ ಸ್ಪರ್ಧೆ: ಬೆಳಾಲಿನ ಕು| ಅನನ್ಯ ರಿಗೆ ರಾಜ್ಯಮಟ್ಟದಲ್ಲಿ ಚಿನ್ನದಪದಕ

ಬೆಳಾಲು: ಕರ್ನಾಟಕ ಸ್ಪೋರ್ಟ್ಸ್ ಅಕಾಡೆಮಿ ಮೈಸೂರು ಇವರು ಆಯೋಜಿಸಿರುವ ವೆಸ್ಟರ್ನ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಬೆಳಾಲಿನ ಕು| ಅನನ್ಯಾ ಬೆಂಗಳೂರಿನಲ್ಲಿ ಜರುಗಿದ ರಾಜ್ಯಮಟ್ಟದ ಡ್ಯಾನ್ಸ್ ಸ್ಪರ್ಧೆಯಲ್ಲಿ ಜಿಲ್ಲೆಯ ಹೆಮ್ಮೆಯ ಕಲೆ ಯಕ್ಷಗಾನ ನೃತ್ಯದೊಂದಿಗೆ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದರು.
ಇವರು ಮೈಸೂರು ಜಿಲ್ಲಾ ಮಟ್ಟದ ವೆಸ್ಟರ್ನ್ ಡ್ಯಾನ್ಸ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಅರ್ಹತೆ ಪಡೆದಿದ್ದರು. ಮುಂದಿನ ಜನವರಿಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇವರು ಬೆಳಾಲು ಗ್ರಾಮದ ಮಾಯಾ ಪೆಲತ್ತಡಿ ವಿಶ್ವನಾಥ ಎಸ್.ಬಿ ಮತ್ತು ಪಲ್ಲವಿ ದಂಪತಿ ಪುತ್ರಿ. ಪ್ರಸ್ತುತ ಮೈಸೂರಿನ ರಾಮಕೃಷ್ಣ ವಿದ್ಯಾ ಕೇಂದ್ರದಲ್ಲಿ ೪ನೇ ತರಗತಿ ವಿದ್ಯಾರ್ಥಿನಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.