ಗೋವಿಂದೂರು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

ಗೋವಿಂದೂರು:  ನ್ಯಾಯತರ್ಪು ಗ್ರಾಮದ ಗೋವಿಂದೂರು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಆಶಾಕಾರ್ಯಕರ್ತೆ ‌ಶ್ರೀಮತಿ ಪೂರ್ಣಿಮಾ  ಮಾತನಾಡಿ, ಮಕ್ಕಳ ಅರೋಗ್ಯ, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಮಾಹಿತಿ ನೀಡಿ, ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ ,ಬಾಣಂತಿ ಮಹಿಳೆಯರಿಗೆ ಸಿಗುವ ಸವಲತ್ತುಗಳನ್ನು ಪಡೆಯುವ  ಮೂಲಕ ಅರೋಗ್ಯವಂತ ಜೀವನವನ್ನು ನಡೆಸುವಂತಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಳಿಯ ಗ್ರಾ.ಪಂ ಸದಸ್ಯೆ ಶ್ರೀಮತಿ ವಿಜಯ.ಹೆಚ್.ಪ್ರಸಾದ್, ಶ್ರೀ.ಕ್ಷೇತ್ರ.ಧ.ಗ್ರಾ.ಯೋ.ಸೇವಾ ಪ್ರತಿನಿಧಿ ಶ್ರೀಮತಿ ವೀನೋದ, ಆಶಾಕಾರ್ಯಕರ್ತೆ ಶ್ರೀಮತಿ ಶಶಿಕಲಾ, ಪರಿಮ ಅಂಗನವಾಡಿ ಕಾರ್ಯಕರ್ತೆ ಕು| ಸುಮಯ್ಯ, ನಾಳ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶಶಿಕಲಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಕ್ಕಳಿಗೆ ವಿವಿಧ ಅಟೋಟ ಸ್ಪರ್ಧೆ ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನವೀನಾ ಸ್ವಾಗತಿಸಿ, ಧನ್ಯವಾದವಿತ್ತರು. ಸಹಾಯಕಿ ಶ್ರೀಮತಿ ಪುಷ್ಪ ಸಹಕರಿಸಿದರು. ಮಕ್ಕಳ ಪೋಷಕರು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.