ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ಸಂಕ್ರಮಣದ ಪ್ರಯುಕ್ತ ವಿಶೇಷ ಪೂಜೆ

ನಾಳ : ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನ.16 ರಂದು ವೃಶ್ಚಿಕ ಸಂಕ್ರಮಣದ ಪ್ರಯುಕ್ತ ದೇವರಿಗೆ ವಿಶೇಷಪೂಜೆ, ದೈವಗಳಿಗೆ ಪರ್ವ ತಂಬಿಲ ಸೇವೆ ನಡೆಯಿತು.

ವಾರದ ಭಜನಾ ಸೇವೆಯನ್ನು ಶ್ರೀಮತಿ ಜಿನ್ನಮ್ಮ ಮತ್ತು ಮಕ್ಕಳು ಖಂಡಿಗ ಮನೆಯವರು ‌ಸೇವಾ ರೂಪದಲ್ಲಿ ಸಲ್ಲಿಸಿದರು. ಶ್ರೀಮತಿ ಮೋನಮ್ಮ ಮತ್ತು ಮಕ್ಕಳು ಕೆಳಗಿನ ಬೆಟ್ಟು ಇವರಿಂದ ಹರಕೆ ರೂಪದಲ್ಲಿ ವಿಶೇಷ ಅಲಂಕಾರದಲ್ಲಿ ರಂಗಪೂಜೆ ಸೇವೆ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳು, ಅಭಿವೃದ್ಧಿ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳು ಮತ್ತು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಶ್ರೀದೇವರ ಕೃಪೆಗೆ ಪಾತ್ರರಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.