ನ.24: 2ನೇ ವರ್ಷದ ಕನ್ನಡ ಸಂಗಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕರ್ನಾಟಕ ರಕ್ಷಣಾ ವೇದಿಕೆ ಬೆಳ್ತಂಗಡಿ ತಾಲೂಕು ಮತ್ತು ದ.ಕ ಜಿಲ್ಲೆಯ ಜಂಟಿ ಆಶ್ರಯದಲ್ಲಿ 63 ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ. 24 ರಂದು ಉಜಿರೆ ಅರಿಪ್ಪಾಡಿ ಮಠ ಕಾಂಪ್ಲೆಕ್ಸ್ ಮುಂಭಾಗದ ಮೈದಾನದಲ್ಲಿ ‘2ನೇ ವರ್ಷದ ಕನ್ನಡ ಸಂಗಮ’ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಕರವೇ ತಾಲೂಕು ಅಧ್ಯಕ್ಷ ಶ್ರೀನಿವಾಸ ಗೌಡ ಪಟ್ರಮೆ ಹೇಳಿದರು.
ನಗರದ ವಾರ್ತಾಭವನದಲ್ಲಿ ನ.19 ರಂದು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ವಿವರ ನೀಡಿದರು.
ಈ ಕಾರ್ಯಕ್ರಮದ ಉದ್ಘಾಟನೆಗೆ ಸಂಘಟನೆಯ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡ ಆಗಮಿಸಲಿದ್ದು ರಾಜ್ಯ ಸಮಿತಿ, ಜಿಲ್ಲಾ ಸಮಿತಿಯ ನಾಯಕರುಗಳು ಭಾಗಿಯಾಗಲಿದ್ದಾರೆ. ಅಲ್ಲದೆ ವಿವಿಧ ಕ್ಷೇತ್ರಗಳ ಗಣ್ಯರುಗಳೂ ಆಗಮಿಸಲಿದ್ದಾರೆ.
ಸಮಾರಂಭದಲ್ಲಿ ಉದ್ಯಮಿ ಬಾಲಕೃಷ್ಣ ಅರಿಪ್ಪಾಡಿತ್ತಾಯ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಲ| ರಾಮ ಪಿ ಸಾಲಿಯಾನ್, ಅಂತಾರಾಷ್ಟ್ರೀಯ ಕರಾಟೆಪಟು ಮತ್ತು ತರಬೇತುದಾರ ಅಬ್ದುಲ್ ರಹಿಮಾನ್ ಉಜಿರೆ, ಉರಗ ಪ್ರೇಮಿ ಸ್ನೇಕ್ ಜಾಯ್, ನಿವೃತ ದೈಹಿಕ ಶಿಕ್ಷಣ ಶಿಕ್ಷಕ ನರೇಂದ್ರ ಕುಮಾರ್ ಧರ್ಮಸ್ಥಳ ಮತ್ತು ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಯಾಕೂಬ್ ಕೊಯ್ಯೂರು ಇವರನ್ನು ಸನ್ಮಾನಿಸಲಾಗುವುದು ಎಂದರು.
ಈ ಕಾರ್ಯಕ್ರಮದ ಅಂಗವಾಗಿ ಉಜಿರೆ ಪಟ್ಟಣದಲ್ಲಿ ಹಾದುಬರುಂತೆ ಕನ್ನಡ ಭಾಷೆ ಸಂಸ್ಕೃತಿ ಜಾಗೃತಿಗಾಗಿನ ಕನ್ನಡ ಅಭಿಮಾನದ ನಡಿಗೆ ಭವ್ಯ ಮೆರವಣಿಗೆಯನ್ನು ಸಂಜೆ ೪ ಕ್ಕೆ ಉಜಿರೆ ಶ್ರೀ ಜನಾರ್ದನ ದೇವಾಲಯದ ಬಳಿಯಿಂದ ಮೈದಾನದವರೆಗೆ ಆಯೋಜಿಸಲಾಗಿದೆ. ಸಭಾ ಕಾರ್ಯಕ್ರಮದ ಬಳಿಕ ಮಂಗಳೂರು ಸ್ವರ ದಿ ಬ್ಯಾಂಡ್ ಪ್ರಖ್ಯಾತ ತಂಡದಿಂದ ರಸಮಂಜರಿ, ತ್ರಿಲೋಕ್ ಡ್ಯಾನ್ಸ್ ಅಕಾಡಮಿಯವರಿಂದ ನೃತ್ಯಪ್ರದರ್ಶನ ನಡೆಯಲಿದೆ ಎಂದು ಅವರು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಉಪಾಧ್ಯಕ್ಷ ಆಬಿದ್ ಅಲಿ ಉಜಿರೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲುಕ್ಮಾನ್ ಇಶಾಂ, ತಾಲೂಕು ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ  ನಾಯ್ಕ ಪಡೀಲು, ಕಾನೂನು ಸಲಹೆಗಾರ ನವಾಝ್ ಷರೀಫ್ ಕಕ್ಕಿಂಜೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.