ಬೂಡುಜಾಲು ಅಲ್ತಿಮಾರ್ ಮನೆಯಲ್ಲಿ ಕೃಷಿವೀಕ್ಷಣೆಯೊಂದಿಗೆ ವಿಶಿಷ್ಟ ರೀತಿಯಲ್ಲಿ ಮಕ್ಕಳ ದಿನಾಚರಣೆ

Advt_NewsUnder_1
Advt_NewsUnder_1
Advt_NewsUnder_1

 

ನಿಡ್ಲೆ: ನಿಡ್ಲೆ ಗ್ರಾಮದ ಬೂಡುಜಾಲು ಅಲ್ತಿಮಾರ್ ವಿಶ್ವನಾಥರವರ ಮನೆಯಲ್ಲಿ ನಿಡ್ಲೆ ಪ್ರೌಢ ಶಾಲಾ ಮಕ್ಕಳ ಕೃಷಿ ವೀಕ್ಷಣೆ, ಮಾಹಿತಿ, ಜಾಗೃತಿ ಕಾರ್ಯಕ್ರಮದೊಂದಿಗೆ ವೈಶಿಷ್ಟ್ಯಪೂರ್ಣವಾಗಿ ಮಕ್ಕಳ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಗ್ರಾ. ಯೋಜನಾಧಿಕಾರಿ ಜಯಕರ ಶೆಟ್ಟಿ ಸಭೆ ಉದ್ಘಾಟಿಸಿದರು. ನಿವೃತ ಪೊಲೀಸ್ ಅಧಿಕಾರಿ ರಾಮಚಂದ್ರ ಭಟ್ ಕೋಂಕ, ನಿಡ್ಲೆ ಸಹಕಾರಿ ಸಂಘದ ಮಾಜಿ ಸಿಬಂದಿ ವಿರೇಶ್ವರ ಹೆಬ್ಬಾರ್ ಮಾಡಂಕಲ್ಲು, ಗ್ರಾ.ಪಂ ಸದಸ್ಯ ರಾಮಣ್ಣ ಗೌಡ ನೂಜಿಲ ಮುಖ್ಯ ಅತಿಥಿಯಾಗಿದ್ದರು.
ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ರಾಜ್‌ಗುರು ಹೆಬ್ಬಾರ್, ಮಾಡಂಕಲ್ಲು ವಾಸುದೇವ ಹೆಬ್ಬಾರ್ ದತ್ತಿನಿಧಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಮನೆಯ ಯಜಮಾನ, ಎಲ್‌ಐಸಿ ಪ್ರತಿನಿಧಿಯೂ ಆಗಿರುವ ವಿಶ್ವನಾಥ ಅವರು, ಜೇನು ಕೃಷಿ, ಜೇನು ತೆಗೆಯುವ ಯಂತ್ರದ ಬಗ್ಗೆ, ಕಸಿಕಟ್ಟುವ ವಿಧಾನದ ಮೂಲಕ ತಳಿ ರಚನೆಯ ಬಗ್ಗೆ, ಸಹಿತ ಸುಮಾರು ೫೨ ಬಗೆಯ ಹೂಗಿಡಗಳನ್ನು ಮನೆಯಲ್ಲಿ ಬೆಳೆಸಿದ ಬಗ್ಗೆ ಮಾಹಿತಿ ನೀಡಿದರು.
ಅಡಿಕೆ ಮರ ಹತ್ತುವ ಪ್ರಾತ್ಯಕ್ಷಿಕೆಯನ್ನೂ ನೀಡಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸ್ವಂತ ಅಡಿಕೆ ಮರ ಹತ್ತಿ ಮಾಹಿತಿಯ ಪ್ರಾಕ್ಟಿಕಲ್ ಅನುಭವ ಪಡೆದರು.
ಅಲ್ಲೇ ಭೋಜನ ಮತ್ತು ಅಪಾರಾಹ್ನ ಮಕ್ಕಳಿಂದ ವಿನೋದಾವಳಿಗಳು ನಡೆದವು. ಹೇಮಾವತಿ ಅಲ್ತಿಮಾರ್ ಸ್ವಾಗತಿಸಿದರು. ಶೋಲಿ ವಿ.ಜೆ ವದನಾರ್ಪಣೆಗೈದರು.ಮಕ್ಕಳಿಗೆ ಗ್ರಾಮೀಣ ಊಟ ಮತ್ತು ಸ್ವತಃ ವಿಶ್ವನಾಥ ಅವರು ಬೆಳೆದ ಪಪ್ಪಾಯಿ ಬಾಳೆಹಣ್ಣು ಸಹಿತ ಹಣ್ಣುಗಳನ್ನು ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.