ಬಿಲ್ಲವ ಸಂಘದ ಸಬಾಭವನ ನಿರ್ಮಾಣದ ವಿಜ್ಞಾಪಣಾ ಪತ್ರ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1

ಬಳಂಜ: ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಬಳಂಜ ಯುವಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ, ನಾಲ್ಕೂರು, ತೆಂಕಕಾರಂದೂರು ಇದರ ನೂತನ ಸಭಾಭವನ ನಿರ್ಮಾಣಕ್ಕೆ ಈಗಾಗಲೆ ಭೂಮಿ ಪೂಜೆ ನಡೆದಿದ್ದು, ಇದರ ವಿಜ್ಞಾಪಣಾ ಪತ್ರವನ್ನು ಬೆಳ್ತಂಗಡಿ ಮಾಜಿ ಶಾಸಕ ಕೆ ವಸಂತ ಬಂಗೇರ ಬಿಡುಗಡೆ ಮಾಡಿದರು.
ಈ ಸಂಧರ್ಭದಲ್ಲಿ ಮಾತಾನಾಡಿ ಅವರು ಸುಮಾರು 60 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಭಾಭವನಕ್ಕೆ ಸರ್ಕಾರದ ವತಿಯಿಂದ ಅನುದಾನ ಮಂಜೂರು ಮಾಡಲು ಯತ್ನಿಸುತ್ತೇನೆ ಎಂದು ಭರವಸೆಯಿತ್ತರು.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಬಳಂಜ ಅಧ್ಯಕ್ಷ ಪ್ರವೀಣ ಕುಮಾರ್ ಎಚ್.ಎಸ್, ಗೌರವಾಧ್ಯಕ್ಷ ಹೆಚ್ ಧರ್ಣಪ್ಪ ಪೂಜಾರಿ, ಗೌರವ ಸಲಹೆಗಾರ ಕೆ.ವಸಂತ ಸಾಲಿಯಾನ್, ನಾರಾವಿ ಜಿ.ಪಂ ಕ್ಷೇತ್ರದ ಸದಸ್ಯ ಧರಣೇಂದ್ರ ಕುಮಾರ್, ಬಳಂಜ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಕಾಪಿನಡ್ಕ, ತಿಮ್ಮಪ್ಪ ಪೂಜಾರಿ ತಾರಿಪಡ್ಪು, ದೇಜಪ್ಪ ಪೂಜಾರಿ ಸುಧಾಮ, ಬಾಲಕೃಷ್ಣ ಪೂಜಾರಿ ಯೈಕುರಿ, ಸುರೇಶ್ ಪೂಜಾರಿ ಜೈಮಾತಾ, ದಿನೇಶ್ ಕೋಟ್ಯಾನ್ ಕುತ್ರೊಟ್ಟು, ಯುವ ಬಿಲ್ಲವ ವೇಧಿಕೆ ಅಧ್ಯಕ್ಷ ಜಗದೀಶ ಬಳ್ಳದ್ದಡ್ಕ, ತಾಲೂಕು ಯುವ ಬಿಲ್ಲವ ಪ್ರಧಾನ ಕಾಯದರ್ಶಿ ರಂಜಿತ್ ಹೆಚ್.ಡಿ ಹಾಗೂ ಸಂಘದ ಪಧಾದಿಕಾರಿಗಳು ಉಪಸ್ಥಿತರಿದ್ದರು.
ಬೆಳ್ತಂಗಡಿ ಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದ ನಿರ್ದೇಶಕ ಸಂತೋಷ್ ಪಿ.ಕೋಟ್ಯಾನ್ ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.