ಬೆಳಾಲು: ಮಾಯಾ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಬೆಳಾಲು:  ಸ. ಉ. ಪ್ರಾ ಶಾಲೆ ಮಾಯಾ ಬೆಳಾಲು ಇಲ್ಲಿ ಎಸ್. ಡಿ.ಎಂ.ಸಿ ಅಧ್ಯಕ್ಷ  ಗಂಗಾಧರ ಸಾಲ್ಯಾನ್ ರವರ ಸಾರಥ್ಯದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು  ಮಕ್ಕಳಿಂದ ದೀಪ ಬೆಳಗುವ ಮೂಲಕ  ಉದ್ಘಾಟಿಸಲಾಯಿತು.

ಶಾಲಾ ಸಂಸತ್ತಿನ ನಾಯಕಿ ಪ್ರತೀಕ್ಷಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳಾಲು ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸುರೇಂದ್ರ ಗೌಡ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ ಬಂಗೇರ, ಗ್ರಾ.ಪಂ ಸದಸ್ಯರಾದ ದಯಾನಂದ್, ಶ್ರೀಮತಿ ಭವಾನಿ, ಶ್ರೀಮತಿ ಪ್ರೇಮ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ಸಂಚಾಲಕ ರಾಧಾಕೃಷ್ಣ ಗೌಡ, ಶಿಕ್ಷಕಿಯರಾದ ಜ್ಯೋತಿ ಎಂ ಎಸ್, ಜಾನ್ಸಿ, ಚೈತ್ರ ಶಿಕ್ಷಕರ ಕಿಶನ್ ಕುಮಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ   ಮಕ್ಕಳಿಗೆ ಉಚಿತವಾಗಿ ಯೋಗ ತರಬೇತಿ ನೀಡುತ್ತಿರುವ ಗ್ರಾಮದ ಹಿರಿಯ , ನಿವೃತ್ತ ಶಿಕ್ಷಕ  ಬಾಲಕೃಷ್ಣ ರವರನ್ನು ಮತ್ತು ಮಾಯಾ ಶಾಲೆಯಲ್ಲಿ 11 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ, ಪ್ರಸ್ತುತ ಗುರುವಾಯನಕೆರೆ ಕ್ಲಸ್ಟರ್ CRP ಗಳಾಗಿ ಸೇವೆ ಸಲ್ಲಿಸುತ್ತಿರುವ ಮಾಯಾ ಶಾಲೆಯ ಚಕ್ರವರ್ತಿ ಸೂಲಿಬೆಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜೇಶ್ ಸವಣಾಲು ಇವರನ್ನು ಪೋಷಕರು ಮತ್ತು ಎಸ್. ಡಿ. ಎಂ ಸಿ ಸದಸ್ಯರು ಸನ್ಮಾನಿಸಿದರು.

ಮಕ್ಕಳ ದಿನಾಚರಣೆ ಅಂಗವಾಗಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಸಲಾಗಿತ್ತು.  ಮುಖ್ಯ ಶಿಕ್ಷಕಿ ಧರ್ಣಮ್ಮಸ್ವಾಗತಿಸಿ, ಟಿಜಿಟಿ ಶಿಕ್ಷಕ  ಪ್ರಸನ್ನ ಎಂ  ವಂದಿಸಿ, ಜಿಪಿಟಿ ಶಿಕ್ಷಕ ಯೋಗೇಶ ಹೆಚ್ ಆರ್   ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.