HomePage_Banner_
HomePage_Banner_
HomePage_Banner_

ಮಿತ್ತಬಾಗಿಲು: ಪಂಚಶ್ರೀ ಭಜನಾ ಮಂಡಳಿ ವಾರ್ಷಿಕೋತ್ಸವ

ಮಿತ್ತಬಾಗಿಲು: ಪಂಚಶ್ರೀ ಭಜನಾ ಮಂಡಳಿ ಗಣೇಶನಗರ, ಮಿತ್ತಬಾಗಿಲು ಇದರ 18 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಇತ್ತೀಚೆಗೆ ಜರುಗಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೇಶವ ಬಂಗೇರ ಗೇರುಕಟ್ಟೆ ಇವರು ಮಾತನಾಡಿ, ಮನುಷ್ಯ ಸಾಧನೆ ಮಾಡುತ್ತಾ ಪರೋಪಕಾರಿಯಾಗಿ ಬದುಕಬೇಕಾದರೆ ಪರಂಪರೆ ಮತ್ತು ಆ ಪರಂಪರೆಯಲ್ಲಿ ಆಗಿ ಹೋದ ಮಹಾನ್ ವ್ಯಕ್ತಿಗಳನ್ನು ಗಮನಿಸಬೇಕು. ಅದಕ್ಕೂ ಮಿಗಿಲಾಗಿ ಆ ವ್ಯಕ್ತಿತ್ವ ರೂಪುಗೊಳ್ಳಬೇಕಾದರೆ ಅವರಿಗೆ ದೊರೆತ ಪ್ರೇರಣೆ, ಪ್ರಭಾವಗಳನ್ನು ಅರಿತುಕೊಳ್ಳಬೇಕು. ಆಡಂಬರದ ಆಚರಣೆಗಳು ಮುಖ್ಯವಲ್ಲ . ಸರಳವಾಗಿ ಮುಕ್ತವಾಗಿ ಸಮಾಜದ ಬಾಂಧವರು ಬೆರೆಯುವ ವಾತಾವರಣ ನಿರ್ಮಾಣವಾಗಬೇಕು. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಮಾತೆಯರ ಪಾತ್ರ ಬಹುಹಿರಿದಾಗಿದೆ ಎಂದು ಶಿವಾಜಿ ಕಥೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರು.

ವೇದಿಕೆಯಲ್ಲಿ ಮಿತ್ತಬಾಗಿಲು ಗ್ರಾ. ಪಂ ಅಧ್ಯಕ್ಷ ನಾರಾಯಣ ಪಾಠಾಳಿ , ಹಿರಿಯರಾದ ವಾಸುದೇವ ರಾವ್ ಕಕ್ಕಿನೇಜಿ, ಮಿತ್ತಬಾಗಿಲು ಗ್ರಾ.ಪಂ  ಸದಸ್ಯರಾದ ಸುಪ್ರಿಯ ಪೂಜಾರಿ, ರಾಮಣ್ಣ ಕುಕ್ಕಾವು, ಮಂಡಳಿಯ ಅಧ್ಯಕ್ಷ  ಲೋಕಯ್ಯ ಗೌಡ ಗಣೇಶ ನಗರ, ಕಾರ್ಯದರ್ಶಿ ರೂಪೇಶ್ ಆಚಾರಿಬೆಟ್ಟು ಮತ್ತಿತರ ಗಣ್ಯರು  ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಭಜನಾ ಮಂಡಳಿ ಸ್ಥಾಪಿಸಿದ ಪಂಚಶ್ರೀ ಪ್ರಶಸ್ತಿಯನ್ನು ಅಣ್ಣು ನಲಿಕೆ, ಪ್ರಶಾಂತ್ ದಿಡುಪೆ ಮತ್ತು ಶ್ರದ್ಧಾ ಪಿ.ಕೆ ಇವರಿಗೆ ಪ್ರಧಾನ ಮಾಡಲಾಯಿತು.  ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ  ನಡೆಯಿತು. ಪ್ರಶಾಂತ್ ದಿಡುಪೆ ಸ್ವಾಗತಿಸಿ,  ಕೇಶವ ಆಚಾರಿಬೆಟ್ಟು ವಂದಿಸಿ, ಗಣೇಶ್ ಪಗರೆ ಕಾರ್ಯಕ್ರಮ ನಿರೂಪಿಸಿದರು

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.