ಕೊಯ್ಯೂರು: ಕರ್ನಾಟಕ ರಾಜ್ಯ ಶಿಕ್ಷಕರ ಸಂಘ ಶಿವಮೊಗ್ಗ ಜಿಲ್ಲೆ ಹಾಗೂ ಟ್ರೆಡಿಶನಲ್ ಶೋಟೋ ಕೈ ಕರಾಟೆ ಅಸೋಸಿಯೇಶನ್ ವತಿಯಿಂದ ನ. 10 ಮತ್ತು 11 ರಂದು ಶಿವಮೊಗ್ಗದಲ್ಲಿ ಆಯೋಜಿಸಿದ್ದ 4ನೇ ರಾಜ್ಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ 21 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 50 ಕೆ.ಜಿ ವಿಭಾಗದಲ್ಲಿ ಕೊಯ್ಯೂರಿನ ಮೋಹನ್ ಪೂಜಾರಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಇವರು ಕೊಯ್ಯೂರು ಗ್ರಾಮದ ಬಜ ನಿವಾಸಿ ಸೇಸಪ್ಪ ಪೂಜಾರಿ ಮತ್ತು ಶ್ರೀಮತಿ ಬೇಬಿ ದಂಪತಿ ಪುತ್ರರಾಗಿದ್ದು, ಉಜಿರೆಯ ಸೆನ್ಸಾಯಿ ಅಬ್ದುಲ್ ರೆಹಮಾನ್ ರವರಿಂದ ತರಬೇತಿ ಪಡೆಯುತ್ತಿದ್ದಾರೆ.