ಬೆಳ್ತಂಗಡಿ: ಸಿದ್ಧ ಉಡುಪು ತಯಾರಿಕಾ ತರಬೇತಿ ಸಮಾರೋಪ

ಬೆಳ್ತಂಗಡಿ : ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಸಹಯೋಗದಲ್ಲಿ ಸಿದ್ಧ ಉಡುಪು ತಯಾರಿಕಾ ತರಬೇತಿ ಸಮಾರೋಪ ಸಮಾರಂಭವು ನ.15 ರಂದು ಜರುಗಿತು.

ಬೆಳ್ತಂಗಡಿ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ನಿರ್ದೇಶಕ ಕೆ. ಬೂದಪ್ಪ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೀಳರಿಮೆ ಬಿಟ್ಟು ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು. ಸ್ವ ಉದ್ಯೋಗ್ಯದಲ್ಲಿ ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ ಎಂದು  ಟೈಲರಿಂಗ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಯೋಜನಾಧಿಕಾರಿ ರೋಹಿತಾಕ್ಷ , ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿ ಮಮತಾ ರಾವ್, ತರಬೇತಿ ಸಂಸ್ಥೆಯ ಪ್ರಾಂಶುಪಾಲ ಚಂದ್ರಶೇಖರ್  ಉಪಸ್ಥಿತರಿದ್ದರು.
ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ಇಲಾಖೆಯ ಸಹಕಾರದೊಂದಿಗೆ 2010 ರಿಂದ 2018 ವರೆಗೆ ಕೈಮಗ್ಗ ಮತ್ತು ಜವುಳಿ ಇಲಾಖೆಯ ಸುವರ್ಣ ವಸ್ತ್ರನೀತಿ ಹಾಗೂ ನೂತನ ಜವುಳಿ ನೀತಿಯಡಿಯಲ್ಲಿ 23 ಬ್ಯಾಚ್‌ಗಳಲ್ಲಿ ಒಟ್ಟು 550 ಮಂದಿಗೆ 2ಸಾವಿರ ರೂ.ನಿಂದ ಆರಂಭಗೊಂಡು ಪ್ರಸ್ತುತ 3500ರೂ. ಶಿಷ್ಯವೇತನ ನೀಡುವ ಕುರಿತು ಈವರೆಗಿನ ಸಾಧನೆ ವರದಿಯನ್ನು ಟೈಲರಿಂಗ್ ಶಿಕ್ಷಕಿ ಉಷಾ ಮಂಡಿಸಿದರು. ತರಬೇತಿ ಸಂಸ್ಥೆಯ ಉಪನ್ಯಾಸಕ ಬಾಲಕೃಷ್ಣ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.