ಕೊಲ್ಲಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

Advt_NewsUnder_1
Advt_NewsUnder_1

ಮಿತ್ತಬಾಗಿಲು: ಇಲ್ಲಿಯ ಕೊಲ್ಲಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಉದ್ಘಾಟನೆಯನ್ನು  ಬೆಳ್ತಂಗಡಿ ಪೊಲೀಸ್ ಠಾಣೆಯ ಸಹಾಯಕ ಉಪ-ನಿರೀಕ್ಷಕ ರಾಮಯ್ಯ ಹೆಗ್ಡೆ ನೆರವೇರಿಸಿ ಮಾತನಾಡಿ, ಮಕ್ಕಳಿಗೆ ಬಾಲ್ಯದ ಶಿಕ್ಷಣವನ್ನು ತಾಯಂದಿರು ಉತ್ತಮ ರೀತಿಯಲ್ಲಿ ನೀಡುವುದರ ಜೊತೆಗೆ ವ್ಯಸನ ಹಾಗೂ ಮೊಬೈಲ್‌ನಿಂದ ದೂರವಿರಿಸಿ ಎಂದು ಕಿವಿ ಮಾತು ಹೇಳಿ, ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಕರೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿ ಮಿತ್ತಬಾಗಿಲು  ಗ್ರಾ.ಪಂ ಅಧ್ಯಕ್ಷ ನಾರಾಯಣ ಪಾಠಾಳಿ ಮಾತನಾಡಿ, ಮಕ್ಕಳೆಂದರೆ ಹೂವಿನ ತರಹ. ಅವರ ಮನಸ್ಸಿಗೆ ನೋವುಂಟು ಮಾಡುವ ಕೆಲಸ ಮಾಡದೆ, ಉತ್ತಮ ಸಮಾಜ ಅವರಿಂದ ನಿರ್ಮಾಣ ಮಾಡಿಸಲು ತಾಯಂದಿರೆಲ್ಲರೂ ಒಗ್ಗೂಡಿ ಉತ್ತಮ ಶಿಕ್ಷಣ ನೀಡೋಣ ಎಂದು ಹೇಳಿದರು.
ಕಾರ್ಯಕ್ರಮ‌ದ ಅಧ್ಯಕ್ಷತೆಯನ್ನು ಅಂಗನವಾಡಿ ಪುಟಾಣಿ ಗಮ್ಯ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಸದಸ್ಯ ವಿಜಯ ಗೌಡ ಕಾಡುಮನೆ, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಮೋನಪ್ಪ ಗೌಡ ಅಂಬ್ರೋಳಿ ಉಪಸ್ಥಿತರಿದ್ದು, ಮಕ್ಕಳ ದಿನಾಚರಣೆ‌ಯ ಶುಭ ಕೋರಿದರು
ಶ್ರೀಮತಿ ಗೋಪಿ  ಸ್ವಾಗತಿಸಿ, ಶ್ರೀಮತಿ ಮಲ್ಲಿಕಾ ಪ್ರಾರ್ಥಿಸಿ,  ಅಂಗನವಾಡಿ ಕಾರ್ಯಕರ್ತೆ ವಂದಿಸಿ, ಸುರೇಂದ್ರ ಬನದಬಾಗಿಲುಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.