ಮತದಾರರ ಮಿಂಚಿನ ನೊಂದಣಿ ಅಭಿಯಾನ

ಬೆಳ್ತಂಗಡಿ : ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನ.20 ಕೊನೆಯ ದಿನವಾಗಿದ್ದು, ಈ ಹಿನ್ನಲೆಯಲ್ಲಿ ವಿಕಲಚೇತನರು, ಮಹಿಳೆಯರು, ದುರ್ಬಲರು ಮತ್ತು ಯುವ ಮತದಾರರ ಅನುಕೂಲಕ್ಕಾಗಿ ನ.17 ಮತ್ತು ನ.18ರಂದು ಮಿಂಚಿನ ನೊಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ನೊಂದಣಿ ಅಭಿಯಾನವು ಬೆಳಗ್ಗೆ 10 ರಿಂದ ಸಂಜೆ 5.30ರ ವರಗೆ ಎಲ್ಲಾ ಮತಗಟ್ಟೆಗಳಲ್ಲಿ ನಡೆಯಲಿದೆ. 2019 ಜ.1 ಕ್ಕೆ 18 ವರ್ಷ ಆಗುವವರು ತಮ್ಮ ವಯಸ್ಸಿನ ದಾಖಲೆ (ಶಾಲಾ ದಾಖಲೆ, ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್, ಪಾನ್‌ಕಾರ್ಡ್ ಸೇರಿದಂತೆ ಯಾವುದಾದೂ ಒಂದು ದಾಖಲೆ ಹಾಗೂ ವಾಸಸ್ಥಳದ ದಾಖಲೆ (ಪಡಿತರ ಕಾರ್ಡ್, ವಿದ್ಯುತ್‌ಬಿಲ್ಲು, ಬ್ಯಾಂಕ್‌ಪಾಸ್‌ಪುಸ್ತಕ ಸೇರಿದಂತೆ ಯಾವುದಾದರೂ ಒಂದು ದಾಖಲೆ) ಜೊತೆ ಎರಡು ಪಾಸ್ ಪೋರ್ಟು ಅಳತೆಯ ಭಾವಚಿತ್ರ ತರಬೇಕು. ಅಭಿಯಾನದಲ್ಲಿ ಹೊಸ ಸೇರ್‍ಪಡೆ, ಹೆಸರು ತೆಗೆಯಲು, ಹೆಸರು, ತಂದೆಯ ಹೆಸರು, ಮನೆ ವಿಳಾಸ, ವಯಸ್ಸು, ಭಾವಚಿತ್ರ ದೋಷಗಳ ಸರಿಪಡಿಸಲು ಹಾಗೂ ವಾಸ ಸ್ಥಳ ಬದಲಾವಣೆಗೆ ಬೇರೆ, ಬೇರೆ ನಮೂನೆಯಲ್ಲಿ ಅರ್ಜಿಯನ್ನು ನೀಡಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.