ಬೆಳ್ತಂಗಡಿ ವಕೀಲರ ಸಂಘದ ಮಹಾಸಭೆ: ಎ.ಪಿ.ಎಂ.ಸಿ ಅಧ್ಯಕ್ಷರಿಗೆ ಸನ್ಮಾನ

ಬೆಳ್ತಂಗಡಿ: ವಕೀಲರ ಸಂಘ ಬೆಳ್ತಂಗಡಿ ಇದರ ವಾರ್ಷಿಕ ಮಹಾಸಭೆಯು ನ. 15 ರಂದು ನ್ಯಾಯಾಲಯದ ವಠಾರದಲ್ಲಿ ಸಂಘದ ಅಧ್ಯಕ್ಷ ಸೇವಿಯರ್ ಪಾಲೇಲಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಎ.ಪಿ.ಎಂ.ಸಿ ಅಧ್ಯಕ್ಷ ಆಯ್ಕೆಯಾದ ನ್ಯಾಯವಾದಿ ಕೇಶವ ಪಿ ಬೆಳಾಲ್ ರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸೇವಾಭಾರತಿ, ಕನ್ಯಾಡಿ ಇವರು ಬೆನ್ನುಮೂಳೆ ಮುರಿತಕ್ಕೊಳಗಾದ ವಿಕಲಚೇತನರಿಗಾಗಿ ಪ್ರಾರಂಭಿಸಿರುವ ಕೊಕ್ಕಡದ ಸೇವಾಧಾಮ ಸೇವಾಚಟುವಟಿಕೆಗಳಿಗಾಗಿ ಸಹಾಯಧನವನ್ನು ಅಧ್ಯಕ್ಷ ಕೃಷ್ಣಪ್ಪ ಗುಡಿಗಾರರವರಿಗೆ ಹಸ್ತಾಂತರಿಸಲಾಯಿತು. ಹಿರಿಯರ ಸಮಿತಿ ಅಧ್ಯಕ್ಷ ಶಶಿಕಿರಣ್ ಜೈನ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮನೋಹರ ಕುಮಾರ್,ಎ ಸ್ವಾಗತಿಸಿ ವರದಿವಾಚಿಸಿದರು. ಉಪಾಧ್ಯಕ್ಷ ಶ್ರೀನಿವಾಸ ಗೌಡ ಸನ್ಮಾನಿತರ ಬಗ್ಗೆ ಪರಿಚಯಿಸಿದರು. ಕೋಶಾಧಿಕಾರಿ ಗಣೇಶ ಗೌಡ ಲೆಕ್ಕಪತ್ರ ಮಂಡಿಸಿದರು. ಓಥ್ ಕಮಿಷನರುಗಳಾಗಿ ಆಯ್ಕೆಯಾದ ನ್ಯಾಯವಾದಿಗಳಾದ ಪ್ರಜ್ವಲ್ ಮತ್ತು ಪ್ರಿಯಾಂಕರವರುಗಳನ್ನು ಸಂಘದ ಪರವಾಗಿ ಅಬಿನಂದಿಸಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಇತ್ತೀಚೆಗೆ ನಿಧನರಾದ ಕೇಂದ್ರ ಮಂತ್ರಿ ಎಚ್. ಎನ್. ಅನಂತ ಕುಮಾರ್ ರವರ ಅತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ನ್ಯಾಯವಾದಿ ಜೋಸ್ನಾ ಪ್ರಾರ್ಥಿಸಿ, ಜತೆ ಕಾರ್ಯದರ್ಶಿ ಮುಮ್ತಾಜ್ ಬೇಗಂ ವಂದಿಸಿ, ಕಾರ್ಯಕಾರಿ ಸಮಿತಿ ಸದಸ್ಯ ಶೈಲೇಶ್ ಆರ್ ಟೋಸರ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.