ಕೊಕ್ಕಡ ಎಂಡೋಪಾಲನಾ ಕೇಂದ್ರಕ್ಕೆ ವಿಧಾನಪರಿಷತ್ ಸರ್ಕಾರಿ ಭರವಸೆಗಳ ಸಮಿತಿ ನಿಯೋಗ ಭೇಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಕೊಕ್ಕಡ: ಎಂಡೋ ಸಂತ್ರಸ್ತರಿಗೆ ಕೊಕ್ಕಡದಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪನೆ, ಸಂತ್ರಸ್ತರಿಗೆ ಗರಿಷ್ಠ ಪ್ರಮಾಣದಲ್ಲಿ ಪರಿಹಾರ, ಸಂತ್ರಸ್ತರನ್ನು ಗುರುತಿಸುವ ಮಾನದಂಡದಲ್ಲಿ ಇರುವ ಒಳಾರ್ಥವನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಡುವುದು ಮತ್ತು ಮೃತಪಟ್ಟಿರುವ ಸಂತ್ರಸ್ತರಿಗೂ ಸೂಕ್ತ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸರಕಾರಕ್ಕೆ ವರದಿ ನೀಡಲಾಗುವುದು ಎಂದು ವಿಧಾನಪರಿಷತ್‌ನ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಕೆ.ಸಿ.ಕೊಂಡಯ್ಯ ಹೇಳಿದರು.
ಕೊಕ್ಕಡ ಎಂಡೋಪಾಲನಾ ಕೇಂದ್ರದಲ್ಲಿ ನ.14ರಂದು ಬೆಳಿಗ್ಗೆ ನಡೆದ ವಿಧಾನಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ನಿಯೋಗ ಭೇಟಿ, ವಿಶೇಷ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಎಂಡೋ ಸಂತ್ರಸ್ತರ ಸಮಸ್ಯೆ ಕುರಿತಂತೆ ಈ ಹಿಂದೆ ವಿಧಾನ ಪರಿಷತ್‌ನಲ್ಲಿ ಸದಸ್ಯ ಎಂ.ಸಿ ನಾಣಯ್ಯ ಅವರು ಪ್ರಸ್ತಾಪಿಸಿದ್ದರು. ಈ ವೇಳೆ ವಿಧಾನ ಪರಿಷತ್‌ನಲ್ಲಿ ಸಂತ್ರಸ್ತರ ಜೊತೆ ಸ್ಪಂದಿಸುವ ಆಶ್ವಾಸನೆ ನೀಡಲಾಗಿತ್ತು. ಸರಕಾರದಿಂದ ರೂಪಿಸಲಾಗಿರುವ ನೆರವುಗಳು ಸಂತ್ರಸ್ತರಿಗೆ ಯಾವ ಮಟ್ಟದಲ್ಲಿ ತಲುಪುತ್ತಿವೆ, ಸರಕಾರದ ಸ್ಪಂದನೆ ಇನ್ಯಾವ ನಿಟ್ಟಿನಲ್ಲಿ ವಿಸ್ತಾರವಾಗಬೇಕಿದೆ ಎಂಬುದನ್ನು ಸ್ವತಃ ಕಣ್ಣಾರೆ ಕಂಡು ಅಧ್ಯಯನ ನಡೆಸಿ ಮುಂದಿನ ಸಭೆಯಲ್ಲಿ ಸೂಕ್ತ ಚರ್ಚೆ ನಡೆಸಲಾಗುವುದು. ಪುತ್ತೂರಿನ ಕೊಲ ಕೇಂದ್ರಕ್ಕೂ ಭೇಟಿನೀಡಿದ್ದು ಈ ಎಲ್ಲಾ ಸಮಸ್ಯೆಗಳು ಮತ್ತು ಬೇಡಿಕೆ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ನೀಡಲು ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಈ ಭಾಗದಲ್ಲಿ ಹೆಚ್ಚುವರಿ ಬೆಳೆ ಬರಬೇಕೆಂದು ರಾಸಾಯನಿಕಗಳನ್ನು ಬಳಸಿದ್ದರಿಂದ ಈ ದುರಂತ ಆಗಿದೆ ಎಂಬುದು ವೇದ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯರುಗಳಾದ ಡಾ.ತೇಜಸ್ವಿನಿ ರಮೇಶ್ ಗೌಡ, ಎಸ್.ರವಿ, ಕೆ.ಟಿ.ಶ್ರೀಕಂಠೇ ಗೌಡ, ಕೆ.ವಿ.ನಾರಾಯಣ ಸ್ವಾಮಿ, ಅರುಣ ಶಹಾಪುರ, ಶರಣಪ್ಪ ಮಟ್ಟೂರ್ ಮತ್ತು ಎಂ.ಎ.ಗೋಪಾಲಸ್ವಾಮಿ, ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ, ಜಂಟಿ ಕಾರ್ಯದರ್ಶಿ ಎಸ್.ನಿರ್ಮಲಾ ಉಪಸ್ಥಿತರಿದ್ದರು. ಈ ಸಂದರ್ಭ ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಹೆಚ್.ಕೆ.ಕೃಷ್ಣಮೂರ್ತಿ, ಬೆಳ್ತಂಗಡಿ ತಹಶೀಲ್ದಾರ್ ಮದನ್ ಮೋಹನ್, ಡಿಸಿ ಕಚೇರಿಯ ಪ್ರೊಬೇಷನರಿ ತಹಶಿಲ್ದಾರ್ ರಶ್ಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ತಾ. ಅಧಿಕಾರಿ ಡಾ. ಕಲಾಮಧು ಶೆಟ್ಟಿ, ಹಿರಿಯ ಆರೋಗ್ಯ ಸಹಾಯಕ ಗಿರೀಶ್, ಆರೋಗ್ಯ ಇಲಾಖೆ ಜಿಲ್ಲಾ ಎಂಡೋ ಸಲ್ಫಾನ್ ನೋಡೆಲ್ ಆಫೀಸರ್ ಅರುಣ್ ಕುಮಾರ್ ಉಪಸ್ಥಿತರಿದ್ದರು.

 ದರುಸೇವಾ ಭಾರತಿಯ ವಿನೋದ್ ಶೆಣೈ, ನರಸಿಂಹರಾಜು, ಕೊಕ್ಕಡ ಎಂಡೋಪಾಲನಾ ಕೇಂದ್ರದ ಮೇನೇಜರ್ ಗೋಪಾಲಕೃಷ್ಣ ಭಟ್, ಎಂಡೋ ವಿರೋಧಿ ಹೋರಾಟ ಸಮಿತಿಯವರಾದ ಪುರಂದರ ಗೌಡ ಕಡೀರ, ಕುಶಾಲಪ್ಪ ಗೌಡ ಪೂವಾಜೆ, ಯೋಗೀಶ್ ಆಲಂಬಿಲ, ಕುಶಾಲಪ್ಪ ಗೌಡ, ಶೀನ ನಾಯ್ಕ್, ತುಕ್ರಪ್ಪ ಶೆಟ್ಟಿ, ರಾಘವ ಭಂಡಾರಿ, ಅಲ್ಬರ್ಟ್ ಮಿನೇಜಸ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯ ಬಳಿಕ ಸಮಿತಿ ಸದಸ್ಯರು ಎಂಡೋ ಪೀಡಿತನಾಗಿದ್ದು ಮಲಗಿದಲ್ಲಿಯೇ ಇರುವ ಕೊಕ್ಕಡ ನಿವಾಸಿ ಸಂತೋಷ್ ಮಿನೇಜಸ್‌ರವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.