HomePage_Banner_
HomePage_Banner_

ದೇವಾಂಗ ಸಮಾಜ ಮುಂಡಾಜೆ ಘಟಕಕ್ಕೆ ಚಾಲನೆ

ಮುಂಡಾಜೆ:  ಮುಂಡಾಜೆ ಎಂ.ಡಿ ಮಾಧವರವರ ಮನೆಯಲ್ಲಿ ದೇವಾಂಗ ಸಮಾಜ ಮುಂಡಾಜೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಾಂಧವರು ಸೇರಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ  ಹೊಂದಬೇಕೆನ್ನುವ ದ್ರಷ್ಟಿಯಿಂದ ದೇವಾಂಗ ಸಮಾಜ ಉಜಿರೆ ವಲಯದ ಮಾರ್ಗದರ್ಶನದಲ್ಲಿ ಘಟಕವನ್ನು ಪ್ರಾರಂಭಿಸಲಾಯಿತು.

ಘಟಕದ ಅಧ್ಯಕ್ಷ ರಾಗಿ ರಾಜ್ ಗೋಪಾಲ್ ಸೋಮಂತಡ್ಕ, ಉಪಾಧ್ಯಕ್ಷ ರಾಗಿ  ಹೇಮಾ ರಾಜೇಶ್ ಸೋಮಂತಡ್ಕ, ಜತೆ ಕಾರ್ಯದರ್ಶಿಯಾಗಿ  ಸವಿತಾ ಕೇಶವ ದೇವಾಂಗ, ಕೋಶಾಧಿಕಾರಿಯಾಗಿ ಸಚಿನ್ ಎಂ.ಎಸ್, ಸಲಹೆಗಾರರಾಗಿ ಸದಾಶಿವ ನೆಯ್ಯಾಲು, ವಾಸುದೇವ ದೇವಾಂಗ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ವಲಯದ ಗೌರವಾಧ್ಯಕ್ಷ ಸಂಜೀವ ಬಡ್ಡಮೆ ಇವರು ಪದಾಧಿಕಾರಿಗಳಿಗೆ ವೀಳ್ಯ ಹಸ್ತಾಂತರ ಮಾಡುವ ಮೂಲಕ ಜವಾಬ್ದಾರಿ ನೀಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಲಯಾಧ್ಯಕ್ಷ  ಪರಮೇಶ್ವರ್ ಒಡಲ ವಹಿಸಿದ್ದರು. ಸಭೆಯಲ್ಲಿ ವಲಯದ ಉಪಾಧ್ಯಕ್ಷ  ರಾಜಪ್ಪ ನೇಕಾರ, ವಲಯದ ಕೋಶಾಧಿಕಾರಿ  ವಸಂತ ಕಾಶಿಬೆಟ್ಟು, ವಲಯದ ಕಾರ್ಯದರ್ಶಿ ರವಿ ನೆಯ್ಯಾಲು, ಜತೆ ಕಾರ್ಯದರ್ಶಿ ಪ್ರಮೋದ್ ಉಪಸ್ಥಿತರಿದ್ದರು
ಎಂ.ಡಿ.ಸಂಜೀವ  ಸ್ವಾಗತಿಸಿ, ಮಹೇಶ್ ವಂದಿಸಿ, ವಲಯದ ಸಂಘಟನಾ ಕಾರ್ಯದರ್ಶಿ ರೋಹಿತ್ ಕಾಶಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.