ಉಜಿರೆ: ಡಾ| ಟಿ ಎನ್ ತುಳಪುಳೆ ದತ್ತಿನಿಧಿ ಉಪನ್ಯಾಸ

Advt_NewsUnder_1
Advt_NewsUnder_1

ಉಜಿರೆ: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಉಜಿರೆ , ಕನ್ನಡ ಸಂಘದ ಆಶ್ರಯದಲ್ಲಿ ಡಾ| ಟಿ. ಎನ್ ತುಳಪುಳೆ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮವು ನ.13 ರಂದು ಉಜಿರೆ ಶ್ರೀ.ಧ.ಮಂ.ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಉಪನ್ಯಾಸಕ ಡಾ| ಹೆಚ್.ಜಿ ಶ್ರೀಧರ್ ಉಪನ್ಯಾಸ ನೀಡಿದರು. ಬೆಳ್ತಂಗಡಿ ಹರಿದಾಸ ಸಾಹಿತ್ಯ ಸೇವಾ ಸಂಘದ ಅಧ್ಯಕ್ಷ ಡಾ| ಟಿ.ಎನ್ ತುಳಪುಳೆ ಗೌರವ ಉಪಸ್ಥಿತರಿದ್ದರು. ಉಜಿರೆ ಶ್ರೀ.ಧ.ಮಂ.ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ| ದಿನೇಶ್ ಚೌಟ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಿನ್ನಿಗೋಳಿ ‘ಯುಗಪುರುಷ’ ಮಾಸ ಪತ್ರಿಕೆಯ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಇವರನ್ನು ಸನ್ಮಾನಿಸಲಾಯತು. ಕಾಲೇಜಿನ ಉಪನ್ಯಾಸಕರು, ಕನ್ನಡ ಸಂಘದ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಂ.ಪಿ ಶ್ರೀನಾಥ್ ಸ್ವಾಗತಿಸಿ, ಸುದ್ದಿ ವರದಿಗಾರ, ಕಸಾಪ ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್ ಅಶ್ರಫ್ ಅಲಿಕುಂಞಿ ಸನ್ಮಾನಿತರನ್ನು ಪರಿಚಯಿಸಿದರು. ಕಸಾಪ ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.