ಬಂದಾರು: ಟಾಲೆಂಟ್ ರಿಸರ್ಚ್ ಫೌಂಡೇಶನ್ ಮಂಗಳೂರು ಇವರು ಸಾಮಾಜಿಕವಾಗಿ ಗುರುತಿಸಿಕೊಂಡಿರುವವರಿಗಾಗಿ ಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಬಂದಾರು ಗ್ರಾಮದ ಓಟೆಚ್ಚಾರು ನಿವಾಸಿ, ಮುಳುಗುತಜ್ಞ ವಿ ಮುಹಮ್ಮದ್ ಬಂದಾರು ಆಯ್ಕೆಯಾಗಿದ್ದಾರೆ.
ಜಿಲ್ಲಾಡಳಿತದ ವತಿಯಿಂದ ನೇತ್ರಾವತಿ ನದಿ ಕಿನಾರೆಯಲ್ಲಿ ಜೀವರಕ್ಷಕ ಈಜುಗಾರರಾಗಿ ನೇಮಿಸಲ್ಪಟ್ಟಿರುವ ವಿ ಮುಹಮದ್ ಅವರು ಈಗಾಲೇ ಅನೇಕ ಮಂದಿಯನ್ನು ನೀರಿನಿಂದ ಮೇಲಕ್ಕೆತ್ತಿ ರಕ್ಷಿಸಿದ್ದೂ ಮಾತ್ರವಲ್ಲದೆ, ನೆರೆ ಮೊದಲಾದ ಸಂದರ್ಭಗಳಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟ ಮೃತದೇಹಗಳನ್ನು ಮೇಲಕ್ಕೆತ್ತಿ ಪೊಲೀಸ್ ಮತ್ತು ಅಗ್ನಿ ಶಾಮಕ ಇಲಾಖೆಗೆ ಪೂರಕ ಸಹಕಾರ ನೀಡಿದ್ದಾರೆ.
ಅವರ ಸೇವೆಯನ್ನು ಗುರುತಿಸಿ ಅನೇಕ ಕಡೆ ಅವರಿಗೆ ಸನ್ಮಾನ, ಪುರಸ್ಕಾರಗಳು ಲಭಿಸಿದ್ದು, ಇತ್ತೀಚೆಗೆ ಕೇರಳದ ಮರ್ಕಝ್ ನಾಲೆಡ್ಜ್ ಸಿಟಿ ವತಿಯಿಂದ ಪ್ರಥಮ ಬಾರಿಗೆ ನೀಡಿದ ಜೀವ ರಕ್ಷಕ ಪ್ರಶಸ್ತಿಯನ್ನೂ ಕೂಡ ಅವರು ವಿಶ್ವವಿಖ್ಯಾತ ಮತಪಂಡಿತ ಕಾಂತಪುರಂ ಎ.ಪಿ ಉಸ್ತಾದ್ ಅವರಿಂದ ಪಡೆದಿದ್ದಾರೆ.