ಗೆಳೆಯರ ಬಳಗ ಗುರಿಪಳ್ಳ ವತಿಯಿಂದ ಕೆಸರುಗದ್ದೆ ಹಗ್ಗ ಜಗ್ಗಾಟ, ಸಾಧಕರಿಗೆ ಸನ್ಮಾನ

ಗುರಿಪಳ್ಳ: ಗೆಳೆಯರ ಬಳಗ ಗುರಿಪಳ್ಳ ಇವರ ವತಿಯಿಂದ ಗುರಿಪಳ್ಳದ ಭಾರದ್ವಾಜ್ ಸದನ ವಠಾರದಲ್ಲಿ ನ. 10 ರಂದು  ಅಂತರ್‌ಜಿಲ್ಲಾ ಮಟ್ಟದ ಪುರುಷರ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾಟ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಬಂಗಾಡಿ ಸಹಕಾರಿ ಸಂಘದ ಅಧ್ಯಕ್ಷ ಎನ್ ಲಕ್ಷ್ಮಣ ಗೌಡ ಇರ್ತಿಲಾಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಕ್ರೀಡಾಪಟು ರಾಮಚಂದ್ರ ಪಾಟ್ಕರ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಗುರಿಪಳ್ಳದ ಭಾರದ್ವಾಜ ಸದನದ ಎಂ ನಾರಾಯಣ ಭಟ್ ಕ್ರೀಡಾಂಗಣದ ಕರೆಯನ್ನು ಶಾಶ್ತ್ರೋಕ್ತವಾಗಿ ಉದ್ಘಾಟನೆಗೊಳಿಸಿದರು.
ವಿಶೇಷ ಆಹ್ವಾನಿತರಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಬಿಲ್ಲವ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಉಪಾಧ್ಯಕ್ಷ ಲ|ನಾಮದೇವ ರಾವ್, ಉಜಿರೆ ಗ್ರಾ.ಪಂ ಸದಸ್ಯ ರವಿ ಕುಮಾರ್ ಬರಮೇಲು, ಕನ್ಯಾಡಿ || ಇಲ್ಲಿನ ಶ್ರೀರಾಮ್ ಅರ್ಥ್ ಮೂವರ್ಸ್ಸ್ ಗುರುರಾಜ್, ಬೆಳಾಲು ಗ್ರಾ.ಪಂ ಸದಸ್ಯ ಜಯಂತ ಗೌಡ ಓಣಿಯಲ್, ಹೊಟೇಲ್ ಪ್ರಿಯಾ ಉಜಿರೆ ಮಾಲಕ ಸುಧಾಕರ ಜತ್ತನ್, ಧರ್ಮಸ್ಥಳ ಗ್ರಾ.ಪಂ ಸದಸ್ಯ ಹರೀಶ್ ಸುವರ್ಣ ಕನ್ಯಾಡಿ ||, ಲೋಕೋಪಯೋಗಿ ಗುತ್ತಿಗೆದಾರ ಎಸ್.ಎಂ ಅಯ್ಯೂಬ್ ನಡ, ಎನ್.ಎನ್ ಬಾಟ್ಲಿಂಗ್ ಕಂಪೆನಿ ಉದ್ಯಮಿ ಲ|ನಿತ್ಯಾನಂದ ನಾವರ, ಕೊಶಮಟ್ಟಂ ಫೈನಾನ್ಸ್ ಕಂಪೆನಿ ರೀಜಿನಲ್ ಮ್ಯಾನೇಜರ್ ಶಾಜಿ ಕುರಿಯನ್, ಹಳ್ಳಿಮನೆ ಉಜಿರೆ ಉದ್ಯಮಿ ಪ್ರವೀಣ್ ಫೆರ್ನಾಂಡಿಸ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಂತೋಷ್ ಉಪ್ಪಾರು, ಶ್ರೀ ಹರ್ಷ ಅರ್ತ್ ಮೂವರ್ಸ್ ನಾವೂರು ಮಾಲಕ ಹರೀಶ್ ಮೋರ್ತಾಜೆ, ಬಾಲಕೃಷ್ಣ ಗೌಡ ಕೇರಿಮಾರ್, ಎಂ.ಕೆ ಪ್ರಸಾದ್, ರಮಾನಂದ ಶರ್ಮ, ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.