ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಪೂಜೆ

ನಾಳ: ನ್ಯಾಯತರ್ಪು ಗ್ರಾಮದ  ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೀಪಾವಳಿ ಪ್ರಯುಕ್ತ ನ.7 ಮತ್ತು 8 ರಂದು ದೇವರಿಗೆ ವಿಶೇಷ ಪೂಜೆ, ದೈವಗಳಿಗೆ ಪರ್ವ, ತಂಬಿಲ ಸೇವೆ ಹಾಗೂ 200ರಕ್ಕೂಹೆಚ್ಚು ವಿವಿಧ ವಾಹನಗಳಿಗೆ ಪೂಜೆ ನಡೆಯಿತು.

ನ.9 ರಂದು ವಾರದ ಭಜನಾ ಸೇವೆಯನ್ನು ಶ್ರೀಮತಿ ಗುಣವತಿ ಕೆ .ಯನ್ ಮತ್ತು ಕೆ. ನಾಣ್ಯಪ್ಪ ಗೌಡ ಕಲಾಯಿತೊಟ್ಟು ಹಾಗೂ ರಂಗ ಪೂಜೆ ಸೇವೆಯನ್ನು ಗೇರುಕಟ್ಟೆ ಜನತಾ ಕಾಲೋನಿ ಶ್ರೀಮತಿ ಲಲಿತಾ ಮತ್ತು ಸುರೇಶ್ ಪೂಜಾರಿ ದಂಪತಿಗಳು ಹರಕೆ ರೂಪದಲ್ಲಿ ಸಲ್ಲಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಅಸ್ರಣ್ಣ ಪೂಜೆ ವಿಧಿ ವಿಧಾನವನ್ನು ‌ವಿದಿವತ್ತಾವಾಗಿ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ಮಜಲು, ವ್ಯವಸ್ಥಾಪನ ಸಮಿತಿ ಸದಸ್ಯೆ ಶ್ರೀಮತಿ ಅಂಬಾ ಅಳ್ವ ,ಸಮಿತಿ ಸದಸ್ಯರು ,ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯ ದರ್ಶಿ ರಾಜೇಶ್ ಪೆಂರ್ಬುಡ , ಅಬಿವೃದ್ದಿ ಸಮಿತಿ ಸದಸ್ಯರು, ಭಜನಾ ಮಂಡಳಿ ಪದಾಧಿಕಾರಿಗಳು, ವ್ಯವಸ್ಥಾಪಕ ಗಿರೀಶ್ ಕುಮಾರ್, ದೇವಸ್ಥಾನ ದ ಸಿಬ್ಬಂದಿ ವರ್ಗ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು. ನಂತರ ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.