‘ಮಲ್ಲ’ಕಾಲನಿಗೆ ವಿದ್ಯುತ್ ಸಂಪರ್ಕ: ಮಾಜಿ ಶಾಸಕರಿಗೆ ಸನ್ಮಾನ

ನೆರಿಯ:  ನೆರಿಯ ಗ್ರಾಮದ ಮಲ್ಲ ಮಲೆಕುಡಿಯ ಕಾಲನಿಗೆ ಶತಮಾನದ ಬಳಿಕ ವಿದ್ಯುತ್ ಸಂಪರ್ಕ ಕಲ್ಪಿಸಿದ ಬಗ್ಗೆ ಮಾಜಿ ಶಾಸಕ ವಸಂತ ಬಂಗೇರ ರವರಿಗೆ ಸನ್ಮಾನ ಕಾರ್ಯಕ್ರಮವು ನ.10 ರಂದು ಜರುಗಿತು
ಸಮಾರಂಭದ ಅಧ್ಯಕ್ಷತೆಯನ್ನು ನೆರಿಯ ಗ್ರಾ.ಪಂ ಅಧ್ಯಕ್ಷ ಮಹಮ್ಮದ್ ಪಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಪಿಎಂಸಿ ನೂತನ ಉಪಾಧ್ಯಕ್ಷ ಅಬ್ದುಲ್ ಗಫೂರ್, ಗ್ರಾ.ಪಂ ಮಾಜಿ ಅಧ್ಯಕ್ಷ ಅಶ್ರಫ್ ನೆರಿಯ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಮಿತಿ ಸದಸ್ಯ ಶೇಖರ್ ಎಲ್, ತಾಲೂಕು ಸಂಘಟನ ಸಂಚಾಲಕ ಜಯಾನಂದ ಸವಣಾಲು, ಕೆಪಿಸಿಸಿ ಸಾಮಾಜಿಕ ಜಾಲತಾಣದ ತಾಲೂಕು ಅಧ್ಯಕ್ಷ ಅನಿಲ್ ಪೈ, ದಸಂಸ(ಅಂಬೇಡ್ಕರ್ ವಾದ)ದ ಜಿಲ್ಲಾ ಸಂಚಾಲಕ ವಸಂತ ಬಿ.ಕೆ, ಸಮಾಜ ಸೇವಕ ರಾಜೇಶ್ ಭಟ್ ಸವಣಾಲು, ಚಾರ್ಮಾಡಿ ಗ್ರಾ.ಪಂ ಸದಸ್ಯ ಯಶೋಧರ ವಲಸರಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಮುಖಂಡ ಆಶ್ವಥ್ ಸೆಬಾಸ್ಟಿಯನ್, ಮಲೆಕುಡಿಯ ಗ್ರಾಮ ಸಮಿತಿ ಅಧ್ಯಕ್ಷ ಸೂರಪ್ಪ ಆಲಂಗಾಯಿ, ಸ್ಥಳೀಯರಾದ ನೋಣಯ್ಯ ಮಲೆಕುಡಿಯ, ವಸಂತ ಮಲೆಕುಡಿಯ, ಪ್ರಮೀಳಾ, ಸವಿತಾ ಲಕ್ಷ್ಮಣ, ಕಮಲಾ, ವಿನೋದ, ಸವಿತಾ, ಮೊದಲಾದವರು ಉಪಸ್ಥಿತರಿದ್ದರು.
ಮಲೆಕುಡಿಯ ಗ್ರಾಮ ಸಮಿತಿ ಕಾರ್ಯದರ್ಶಿ ಪುಷ್ಪಾ ಕಾಟಾಜೆ ಸ್ವಾಗತಿಸಿ, ಮಾಜಿ ಎಪಿಎಂಸಿ ಉಪಾಧ್ಯಕ್ಷ ಲಕ್ಷ್ಮಣ ಆಲಂಗಾಯಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.