ಸಕಲ ಕಲಾವಲ್ಲಭ ಧನ್‌ರಾಜ್ ನಿಡಿಗಲ್

ಧನ್‌ರಾಜ್ ನಿಡಿಗಲ್

ಉಜಿರೆ: ಬಡತನದಲ್ಲಿ ಬೆಳೆದರೂ ತನ್ನಲ್ಲಿರುವ ಕಲೆಗೆ ಬಡತನವಿಲ್ಲ ಎಂದು ತೋರಿಸಿಕೊಟ್ಟ ಪರಿಶ್ರಮಿ, ಹಠವಾದಿ, ಶ್ರಮಜೀವಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಉದ್ಯೋಗಿ ಧನ್‌ರಾಜ್ ನಿಡಿಗಲ್.  28 ರ ಹರೆಯದ ಧನ್‌ರಾಜ್ ಬಾಲ್ಯದಿಂದಲೇ ಹಲವಾರು ಹವ್ಯಾಸಗಳನ್ನು ರೂಡಿಸಿ ಬೆಳೆದವರು. ಇವರಲ್ಲಿ ಪ್ರತಿಭೆಗಳೆಂದರೆ ಹಾಡು ಹೇಳುವುದು. ನಾಟಕದಲ್ಲಿ ಅಭಿನಯ, ನೃತ್ಯ ಮಾಡುವುದು, ಕವನ ಬರೆಯುವುದು, ಕಿರುಚಿತ್ರ ನಿರ್ದೇಶನ, ಹಾಗೇಯೇ ಉತ್ತಮ ಕ್ರಿಡಾಪಟು, ಕ್ರಿಕೆಟ್, ಇವರ ಇಷ್ಟದ ಆಟ ಬೆಂಕಿಯೊಂದಿಗೆ ತಾಲಿಮು ಪ್ರದರ್ಶನ.
ಬಾಯಿಯಿಂದಲೇ ತೆಂಗಿನಕಾಯಿ ಸಿಪ್ಪೆ, ಬಾಟಲಿ ಮುಚ್ಚಲವನ್ನು ತೆಗೆಯುತ್ತಾರೆ. ಇನ್ನೂರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಹಾಡುಹಾಡಿ ಸೈ ಎನಿಸಿ ಕೊಂಡಿದ್ದಾರೆ. ಮೂರು ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ. ಇವರ ನಿರ್ದೇಶನದ “ಸಾವಿನ ಸವಾರಿ” ಕಿರುಚಿತ್ರಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ. ಸಾಮಾಜಿಕ ಜಾಲತಾಣದಲ್ಲಿ ತುಂಬಾ ಜನಪ್ರಿಯರಾಗಿರುವ ಇವರು ಕೃಷಿ ಚಟುವಟಿಕೆಯ ಎಲ್ಲಾ ರೀತಿಯ ಕೆಲಸ ನಿರ್ವಹಿಸುತ್ತಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಹಲವು ನಾಟಕದಲ್ಲಿ ಅಭಿನಯಿಸಿದ್ದಾರೆ. ಇವರು ಅಭಿನಯಿಸಿದ ಜನಪ್ರಿಯವಾದ ನಾಟಕಗಳಾದ ಮಿಸ್ ಸದಾರಮೆ, ತೆಲಿಕೆ ನಲಿಕೆ ಕಿರಿಕಿರಿಪಾರ್ಟಿ ಕನ್ನಡ ಮಾಧ್ಯಮ ಶಾಲೆ, ಡ್ರಾಮ ಸಿನಿಯರ್ಸ್  ತುಳುನಾಡ ವೈಭವ. ತೆಲಿಕೆ ನಲಿಕೆ ತಂಡ ಉಜಿರೆ ಇದರಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಚಲನಚಿತ್ರಗಳಲ್ಲಿ ಹಾಡುವ ಕನಸಿನಲ್ಲಿ ಅವರು ತಮ್ಮ ಪರಿಶ್ರಮದ ಹಾದಿಯನ್ನು ಸವೆಸುತ್ತಿದ್ದಾರೆ. ಇವರು ನಿಡಿಗಲ್  ಕಾಂತಪ್ಪ ಮಡಿವಾಳ ಮತ್ತು ಶ್ರೀಮತಿ ಶಶಿಕಲಾ ದಂಪತಿ ಪುತ್ರರಾಗಿದ್ದಾರೆ.
ಸುರೇಂದ್ರ ಜೈನ್ ನಾರಾವಿ,ಎಸ್.ಡಿ.ಎಂ ಕಾಲೇಜು ಉಜಿರೆ 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.