ನ. 21: ಉಜಿರೆಯಲ್ಲಿ ಉಚಿತ ಕೃತಕ ಕಾಲು ಜೋಡಣಾಶಿಬಿರ

ಸಾಂದರ್ಭಿಕ ಚಿತ್ರ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಕರ್ನಾಟಕ ಮಾರ್‌ವಾರಿ ಯೂತ್ ಫೆಡರೇಶನ್ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ  ಕಾಲಿನ ಉಚಿತ ತಪಾಸಣೆ ಹಾಗೂ ಕೃತಕ ಕಾಲು ಜೋಡಣಾ ಶಿಬಿರವು ನ.21 ರಂದು ಉಜಿರೆ  ಶ್ರೀ ಶಾರದಾ ಮಂಟಪದಲ್ಲಿ ಜರುಗಲಿದೆ.
ಅಪಘಾತದಲ್ಲಿ, ಸಕ್ಕರೆ ಕಾಯಿಲೆ ಹಾಗೂ ಗ್ಯಾಂಗ್ರೀನ್ ಕಾಯಿಲೆಯಿಂದ ಕಾಲು ಅಥವಾ ಪಾದವನ್ನು ಕಳೆದುಕೊಂಡವರು ಅಥವಾ ಮುಂಚಿತವಾಗಿ ಕೃತಕ ಕಾಲು ಇದ್ದು ಅದರ ದುರಸ್ತಿ ಅಗತ್ಯವಿದ್ದಲ್ಲಿ, ಅಂಥವರು ಈ ಶಿಬಿರದಲ್ಲಿ ಪಾಲ್ಗೊಂಡು ಕೃತಕ ಕಾಲು ಜೋಡಣೆಯನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು.
ಬೆಳ್ತಂಗಡಿ ಆಸುಪಾಸಿನ ತಾಲೂಕಿನವರೆಲ್ಲರೂ ಈ ಶಿಬಿರದ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
ಶಿಬಿರಕ್ಕೆ ಹೆಸರು ನೋಂದಾಯಿಸುವವರು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಜಗದೀಶ ಪ್ರಸಾದ್(ಮೊ: 9480289300), ಸದಸ್ಯ ಡಾ| ಶಶಿಕಾಂತ್ ಡೋಂಗ್ರೆ (ಮೊ: 9448548731) ಇವರನ್ನು ಸಂಪರ್ಕಿಸಬಹುದು ಎಂದು ರೋಟರಿ ಕ್ಲಬ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.