ಶ್ರೀ ಕ್ಷೇತ್ರ ಸೌತಡ್ಕದಲ್ಲಿ ದೀಪಾವಳಿ ಪ್ರಯುಕ್ತ ಗೋಪೂಜೆ

ಕೊಕ್ಕಡ: ಇಲ್ಲಿಯ ಶ್ರೀ ಕ್ಷೇತ್ರ ಸೌತಡ್ಕದ ಕಾಮಧೇನು ಗೋಶಾಲೆಯಲ್ಲಿ ದೀಪಾವಳೀ ಹಬ್ಬದ ನಿಮಿತ್ತ ಪೂರ್ವಶಿಷ್ಟ ಸಂಪ್ರದಾಯದಂತೆ ನ.8 ರಂದು ಗೋಪೂಜೆ ನೆರವೇರಿತು. ಶ್ರೀ ಕಾಮಧೇನು ಗೋಶಾಲೆಯ ಸುಮಾರು 280 ಕ್ಕೂ ಮಿಕ್ಕಿ ಗೋವುಗಳಿಗೆ ಗೋಪೂಜೆಯನ್ನು ನೆರವೇರಿಸಲಾಯಿತು.

ಶ್ರೀ ಕ್ಷೇತ್ರದ ಅರ್ಚಕ ಸುಬ್ರಹ್ಮಣ್ಯ ತೋಡ್ತಿಲ್ಲಾಯ ಗೋಪೂಜೆಯನ್ನು ನೆರವೇರಿಸಿದರು. ಈ ಸಂದರ್ಭ ಶ್ರೀಕ್ಷೇತ್ರ ಸೌತಡ್ಕದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ , ಸದಸ್ಯರುಗಳಾದ ಕೊಲ್ಲಾಜೆ ವಿಶ್ವನಾಥ, ಪಿ. ವಿಶ್ವನಾಥ ಶೆಟ್ಟಿ, ಅಣ್ಣಪ್ಪ ಗೌಡ ಕಾಶಿ , ಪ್ರಶಾಂತ್ ರೈ ಅರಂತಬೈಲು, ಗಣೇಶ್ ಪಿ.ಕೆ., ಸಿನಿ ಗುರುದೇವನ್, ಸೌಮ್ಯ ಪ್ರಕಾಶ್,ಉದ್ಯಮಿ ಹರೀಶ್ ಕುಕ್ಕೆ ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು. ಗೋಪೂಜೆಯ ಬಳಿಕ ಗೋಶಾಲೆಯ ಎಲ್ಲ ಗೋವುಗಳಿಗೆ ಅವಲಕ್ಕಿ ಪಂಚಕಜ್ಜಾಯ, ದೋಸೆಗಳನ್ನು ತಿನ್ನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.