ಹಿರಿಯ ಗುತ್ತಿಗೆದಾರ ಅಬ್ಬೋನು ಬದ್ಯಾರ್ ನಿಧನ

ಬದ್ಯಾರ್: ತಾಲೂಕಿನ ಹಿರಿಯ ಗುತ್ತಿಗೆದಾರರಲ್ಲಿ ಓರ್ವರಾಗಿದ್ದ ಸಾಮಾಜಿಕ ಧಾರ್ಮಿಕ ಸಂಘಟಕ ಅಬ್ಬೋನು ಬದ್ಯಾರ್(69ವ.) ಅಲ್ಪಕಾಲದ ಅಸೌಖ್ಯದಿಂದ ನ. 9ರಂದು ನಿಧನರಾಗಿದ್ದಾರೆ.
ಕೆಲದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಶಸ್ತ್ರ ಚಿಕಿತ್ಸೆಗೊಳಗಾಗಿ ಬದ್ಯಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಅವರು ನ. 9 ರಂದು ಕೊನೆಯುಸಿರೆಳೆದರು.
ಮೃತರು ಬೆಳ್ತಂಗಡಿ ತಾಲೂಕು ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಎಸ್‌ಎಮ್‌ಎ ಮಾಜಿ ಅದ್ಯಕ್ಷರಾಗಿ, ತಾಲೂಕಿನ ಹಲವಾರು ಸುನ್ನಿ ಸಂಘ ಸಂಸ್ಥೆಗಳ ಪೋಷಕ ಸದಸ್ಯರಾಗಿ, ಗುರುವಾಯನಕೆರೆ ಕೇಂದ್ರ ಜುಮ್ಮಾ ಮಸ್ಜಿದ್ ಅಧೀನ ಸಂಸ್ಥೆಯಾದ ಬದ್ಯಾರ್ ಬದ್ರಿಯಾ ಜುಮ್ಮಾ ಮಸ್ಜಿದ್ ಬಹುಕಾಲದ ಅಧ್ಯಕ್ಷರಾಗಿ, ತಾಜುಲ್ ಉಲಮಾ ನೇತ್ರತ್ವದಲ್ಲಿ ಸಮಸ್ತದಲ್ಲಿ ಅಚಲವಾಗಿ ನಿಂತು ಸುನ್ನತ್ ಜಮಾಅತ್‌ನ ಧಾರ್ಮಿಕ ಚಳವಳಿಯಲ್ಲಿ ಗುರುತಿಸಿಕೊಂಡಿದ್ದರು. ಸರಳ ಸಜ್ಜನಿಕೆಯ ಮೃದು ಸ್ವಭಾವಿಯಾಗಿದ್ದ ಅವರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸುನ್ನೀ ವಲಯದಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಮೃತರು ಪತ್ನಿ, ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಅವರ ಮರಣದ ವಿಚಾರ ತಿಳಿಯುತ್ತಿದ್ದಂತೆ ನಾಡಿನುದ್ದಗಲದಿಂದ ಅನೇಕ ಮಂದಿ ಹಿರಿಯ ವಿದ್ವಾಂಸರುಗಳು, ಸಂಘಟನಾ ನಾಯಕರು, ಕಾರ್ಯಕರ್ತರು, ಜಾತಿ ಬೇಧ ಮರೆತು ಅನೇಕ ಮಂದಿ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು. ಮೃತರ ಅಂತಿಮ ಸಂಸ್ಕಾರವನ್ನು ಇಂದು (ನ.10) ನೆರವೇರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.