ಶಿವಳ್ಳಿ ವಿಪ್ರ ಯುವವೇದಿಕೆ : ಕ್ರೀಡಾಕೂಟದಲ್ಲಿ ಉಜಿರೆ ತಂಡಕ್ಕೆ ವಿಪ್ರಕಪ್

Advt_NewsUnder_1
Advt_NewsUnder_1
Advt_NewsUnder_1

ಉಜಿರೆ : ಸಂಘದ ಬಲವೃದ್ಧಿಗೆ ಮಹಿಳಾ ವೇದಿಕೆ, ಯುವವೇದಿಕೆಗಳು ಕ್ರೀಡೆ, ಪ್ರವಾಸ, ಸಾಂಸ್ಕೃತಿ ಕಾರ್ಯಕ್ರಗಳು ಸ್ಪೂರ್ತಿ ನೀಡುತ್ತದೆ. ಹೊಸ ಹೊಸ ಕಾರ್ಯಕ್ರಮಗಳಿಂದ ಸ್ನೇಹ, ಭ್ರಾತೃತ್ವದಿಂದ ಸಂಘಟನೆ ಬೆಳೆಯುತ್ತದೆಯೆಂದು ಖ್ಯಾತ ನ್ಯಾಯವಾದಿ ಬಿ.ಕೆ ಧನಂಜಯ ರಾವ್ ನುಡಿದರು.
ಅವರು ನ. 1 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಪ್ರಾಂಗಣದಲ್ಲಿ ಶಿವಳ್ಳಿ ವಿಪ್ರ ಯುವ ವೇದಿಕೆಯ ಆಶ್ರಯದಲ್ಲಿ ಪುರುಷರಿಗೆ ಕ್ರಿಕೆಟ್ ಮತ್ತು ಮಹಿಳೆಯರಿಗೆ ತ್ರೋಬಾಲ್ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಕ್ರೀಡಾಕೂಟವನ್ನು ಶ್ರೀ ಜನಾರ್ದನ ದೇವಸ್ಥಾನದ ಶರತ್‌ಕೃಷ್ಣ ಪಡ್ವೆಟ್ನಾಯ ಉದ್ಘಾಟಿಸಿ ವಿಪ್ರ ಸಮಾಜದ ಯುವಕರು ಕ್ರೀಡಾ ಸ್ಪೂರ್ತಿಯಿಂದ ಯುವ ವೇದಿಕೆಯನ್ನು ಬಲಪಡಿಸಬೇಕೆಂದು ಬೆಳ್ತಂಗಡಿ ತಾ| ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಉಪಾಧ್ಯಕ್ಷ ನಾಗೇಶ ರಾವ್ ಮುಂಡ್ರೂಪ್ಪಾಡಿ, ಕಾರ್ಯದರ್ಶಿ ರಾಜ ಪ್ರಸಾದ್ ಪೋಳ್ನಾಯ, ವಿಪ್ರ ಯುವ ವೇದಿಕೆ ಅಧ್ಯಕ್ಷ ದುರ್ಗಾಪ್ರಸಾದ ಕೆರ್ಮುಣ್ಣಾಯ, ಮಚ್ಚಿನ ವಲಯಾಧ್ಯಕ್ಷ ಗುರುಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಭಾರ್ಗವಿ ಶಬರಾಯ ಸ್ವಾಗತಿಸಿ, ಶಿವಕುಮಾರ್ ಬಾರಿತ್ತಾಯ ನಿರೂಪಿಸಿ, ಅಂಕಿತಾ ಉಪಾಧ್ಯಾಯ ವಂದಿಸಿದರು.
ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷ ದುರ್ಗಾಪ್ರಸಾದ್ ಕೆರ್ಮುಣ್ಣಾಯ, ಶಿಕ್ಷಕ ವಸಂತ ಮಂಜಿತ್ತಾಯ, ರವಿಚಂದ್ರ ಚಕ್ಕಿತ್ತಾಯ ಮತ್ತು ಗಾಯತ್ರಿ ಶ್ರೀಧರ್ ಉಪಸ್ಥಿತರಿದ್ದು ವಿಜೇತ ತಂಡಗಳಿಗೆ ಪಾರಿತೋಷಾಕ ವಿತರಿಸಿದರು..
ಪುರುಷರಿಗಾಗಿ ಏರ್ಪಡಿಸಲಾದ ಕ್ರಿಕೆಟ್ ಪಂದ್ಯಾಟದಲ್ಲಿ ಉಜಿರೆ ವಲಯ ತಂಡ ಧರ್ಮಸ್ಥಳ ವಲಯವನ್ನು ಮಣಿಸಿ ವಿಪ್ರಕಪ್ ಪಡೆಯಿತು. ಮಹಿಳೆ ಯರಿಗಾಗಿ ಏರ್ಪಡಿಸಲಾದ ತ್ರೋಬಾಲ್ ಪಂದ್ಯಾಟದಲ್ಲೂ ಉಜಿರೆ ವಲಯ ತಂಡ ಕುವೆಟ್ಟು ವಲಯ ತಂಡವನ್ನು ಸೋಲಿಸಿ ವಿಪ್ರಕಪ್ ತನ್ನದನ್ನಾಗಿಸಿ ಕೊಂಡಿತು. ದುರ್ಗಾ ಪ್ರಸಾದ್ ಕೆರ್ಮುಣ್ಣಾಯ ಪಂದ್ಯ ಶ್ರೇಷ್ಠ ಹಾಗೂ ಧರ್ಮಸ್ಥಳ ವಲಯದ ಕಾರ್ತಿಕ್ ಸರಣಿ ಶ್ರೇಷ್ಢ ಪುರಸ್ಕಾರ ಪಡೆದರು. ತೀರ್ಪುಗಾರರಿಗೆ ಸ್ಮರಣಿಕೆ ನೀಡಲಾಯಿತು. ಶಿವಕುಮಾರ್ ಬಾರಿತ್ತಾಯ ನಿರೂಪಿಸಿ, ಭಾರ್ಗವಿ ಶಬರಾಯ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.