ರಾಜ್ಯೋತ್ಸವ ಪ್ರಯುಕ್ತ ಫ್ರೆಂಡ್ಸ್ ಮಡಂತ್ಯಾರು ವತಿಯಿಂದ ಗ್ರಿಪ್ ಹಗ್ಗಜಗ್ಗಾಟ ಪಂದ್ಯಾಟ

Advt_NewsUnder_1
Advt_NewsUnder_1
Advt_NewsUnder_1

ಫ್ರೆಂಡ್ಸ್ ಮಡಂತ್ಯಾರು ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ 8 ನೇ ವರ್ಷದ 550 ಕೆ.ಜಿ ವಿಭಾಗದ ಮುಕ್ತ ಸಿಂಗಲ್ ಗ್ರಿಪ್ ಹಗ್ಗಜಗ್ಗಾಟ ಪಂದ್ಯಾಟ ನ. 4 ರಂದು ಮಡಂತ್ಯಾರು ಕೊರೆಯ ಕಂಪೌಂಡ್‌ನಲ್ಲಿ ಉದ್ಘಾಟನೆಗೊಂಡಿತು.
ಉದ್ಘಾಟನೆಯನ್ನು ಮಾಲಾಡಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಫೆಡ್ರಿಕ್ ಡಿಸೋಜಾ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿದ್ದ ಮರದ ವ್ಯಾಪಾರಿ ಹಾಗೂ ನೂರುಲ್ ಹುದಾ ಜುಮ್ಮಾ ಮಸ್ಜಿದ್ ಮಡಂತ್ಯಾರು ಅಧ್ಯಕ್ಷ ಹಾಜಿ ನಝೀರ್ ಭಾಗವಹಿಸಿದ್ದರು. ಕ್ರೀಡಾಂಗಣದ ಉದ್ಘಾಟನೆಯನ್ನು ರಾಮಣ್ಣ ಪೂಜಾರಿ ಕೋಟೆಗುತ್ತು ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಫ್ರೆಂಡ್ಸ್ ಮಡಂತ್ಯಾರು ಅಧ್ಯಕ್ಷ ರೋಷನ್ ಲೋಬೋ ವಹಿಸಿದ್ದರು.
ಗೌರವಾಧ್ಯಕ್ಷ ರೋಶನ್ ಸೇರಾ, ಕಾರ್ಯದರ್ಶಿ ರಾಮಣ್ಣ ಮೂಲ್ಯ ಅಲೆಕ್ಕಿ, ಕೋಶಾಧಿಕಾರಿ ಮುಹಮ್ಮದ್, ತಾ.ಪಂ ಮಾಜಿ ಸದಸ್ಯ ವಿನ್ಸೆಂಟ್ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜೀವ ಶೆಟ್ಟಿ ಎಡ್ತೂರು ಕಾರ್ಯಕ್ರಮ ನಿರೂಪಿಸಿದರು. ಪುರುಷೋತ್ತಮ ಶೆಟ್ಟಿ ಸ್ವಾಗತಿಸಿದರು. ಮಡಂತ್ಯಾರು ಗ್ರಾ.ಪಂ ಸದಸ್ಯ ಅಬ್ದುಲ್ ರಹಿಮಾನ್ ಪಡ್ಪು ವಂದನಾರ್ಪಣೆಗೈದರು. ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ನಡೆದ ಈ ಕ್ರೀಡಾಕೂಟದ ಪ್ರಾರಂಭದಲ್ಲಿ ದಿನೇಶ್ ಶೆಟ್ಟಿ ಕರಾಯ ನಾಡಗೀತೆ ಹಾಡಿದರು. ಬಳಿಕ ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟನೆಗೊಳಿಸಲಾದರೆ, ಕ್ರೀಡಾಂಗಣಕ್ಕೆ ಕಾಯಿ ಒಡೆದು ಚಾಲನೆ ನೀಡಲಾಯಿತು. ಫ್ರೆಂಡ್ಸ್ ಮಡಂತ್ಯಾರು ತಂಡದ ಸದಸ್ಯರು ಹಗ್ಗ ಜಗ್ಗಾಟದ ಪ್ರದರ್ಶನ ಪಂದ್ಯ ನಡೆಸಿಕೊಟ್ಟರು. ಫ್ರೆಂಡ್ಸ್ ಮಡಂತ್ಯಾರು ತಂಡದ ಸರ್ವ ಧರ್ಮೀಯ ಸದಸ್ಯರು ಈ ಕ್ರೀಡಾಕೂಟದ ಯಶಸ್ವಿಗೆ ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.