ವಾಟ್ಸ್‌ಆಪ್ “ರಾಜಕೇಸರಿ ಬ್ಲಡ್ ಬ್ಯಾಂಕ್” ಉದ್ಘಾಟನೆ

ವೇಣೂರು: ಜನಪರ ಕಾರ್ಯಕ್ರಮಗಳ ಮೂಲಕ ಕಡಿಮೆ ಅವಧಿಯಲ್ಲೇ ಅತೀ ಹೆಚ್ಚು ಜನಮೆಚ್ಚುಗೆ ಪಡೆದುಕೊಂಡಿರುವ ತಾಲೂಕಿನ ಹೆಸರಾಂತ ಸಂಘಟನೆ ರಾಜಕೇಸರಿ ಬೆಳ್ತಂಗಡಿ ವತಿಯಿಂದ “ರಾಜಕೇಸರಿ ಬ್ಲಡ್ ಬ್ಯಾಂಕ್” ಎಂಬ ರಕ್ತದಾನಿಗಳ ಮಾಹಿತಿ ವೆಬ್ಸೈಟ್, ವಾಟ್ಸ್‌ಆಪ್ ಗ್ರೂಪ್ ರಚಿಸಲಾಗಿದ್ದು ಅದರ ಉದ್ಘಾಟನೆಯನ್ನು ನ. 4 ರಂದು ವೇಣೂರಿನ ನವಚೇತನ ವಿಶೇಷ ಚೇತನ ಶಾಲೆಯಲ್ಲಿ ಉದ್ಘಾಟನೆಗೊಳಿಸುವ ಮೂಲಕ ನಡೆಸಲಾಯಿತು.
ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್, ಕಡಕ್ ಪೊಲೀಸ್ ಅಧಿಕಾರಿ ಎಂದೇ ಜನಮೆಚ್ಚುಗೆ ಪಡೆದಿರುವ ಸಂದೇಶ್ ಕುಮಾರ್ ಪಿ. ಜಿ ಅವರು ಈ ಉದ್ಘಾಟನೆ ನಡೆಸಿಕೊಟ್ಟರು. ಅಲ್ಲದೆ ಸಂಘಟನೆಯ ವತಿಯಿಂದ ಈ ನವಚೇತನ ಸ್ಪೆಷಲ್ ಸ್ಕೂಲ್ ಎಲ್ಲಾ ಅರ್ಹ ವಿಶೇಷ ಚೇತನ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಚಟವಟಿಕೆಗಳೊಂದಿಗೆ ಮಕ್ಕಳಿಗೆ ಸಿಹಿ ತಿಂಡಿ, ಹಾಗೂ ಭೋಜನ ವ್ಯವಸ್ಥೆ ಸಂಪೂರ್ಣ ನೆರವೇರುವವರೆಗೂ ಅವರು ಬೆಳಗ್ಗಿನಿಂದಲೂ ಉಪಸ್ಥಿತರಿದ್ದು ಸಂಘಟನೆಯ ಕಾರ್ಯವನ್ನು ಪ್ರೋತ್ಸಾಹಿಸಿದರು.
ರಾಜಕೇಸರಿ ಸಂಘಟನೆ ಹೆಜ್ಜೆ ಇಟ್ಟಿರುವ ಈ ಅಂತರ್ಜಾಲ ಬ್ಲಡ್ ಬ್ಯಾಂಕ್ ಮೂಲಕ ತುರ್ತು ಸಂದರ್ಭಗಳಲ್ಲಿ ರಕ್ತದ ಅಗತ್ಯ ಇರುವ ಮಂದಿಗೆ ಜಾತಿ ಮತ ಧರ್ಮದ ಬೇಧವಿಲ್ಲದೆ ಅವರು ಇರುವ ಆಸ್ಪತ್ರೆಗೇ ತೆರಳಿ ರಕ್ತ ನೀಡುವ ಮತ್ತು ಆದಷ್ಟು ಅವರವರ ಗುಂಪಿಗೆ ಬೇಕಾದ ರೀತಿಯಲ್ಲೇ ರಕ್ತ ಹೊಂದಿಸಿಕೊಡುವ ಮಹತ್ ಕಾರ್ಯ ನಡೆಯಲಿದೆ ಎಂದು ಸ್ಥಾಪಕಾಧ್ಯಕ್ಷ ದೀಪಕ್ ಜಿ ಈ ಸಂದರ್ಭ ತಿಳಿಸಿದರು.
ಉದ್ಘಾಟನೆಯ ಈ ಕಾರ್ಯಕ್ರಮದಲ್ಲಿ ದೀಪಕ್ ಜಿ ಮಾತ್ರವಲ್ಲದೆ ತಾ. ಸಂಚಾಲಕ ತಾ. ಸಂಚಾಲಕ ಪ್ರದೀಪ್ ಶೆಟ್ಟಿ, ಮಡಂತ್ಯಾರು ಶಾಖೆ ಅಧ್ಯಕ್ಷ ಪ್ರವೀಣ್, ಕುತ್ಲೂರು ಶಾಖೆ ಅಧ್ಯಕ್ಷ ಲೋಕೇಶ್ ಕುಮಾರ್, ಸದಸ್ಯರುಗಳಾದ ಜೆಪಿ ಪ್ರಕಾಶ್, ಸಂತೋಷ್ ಕಟ್ಟೆ, ರಾಜೇಶ್ ರೇಷ್ಮೆರೋಡ್, ಪ್ರಶಾಂತ್, ಶ್ರೀರಾಮ್ ಫೈನಾನ್ಸ್ ಮೆನೇಜರ್ ಸಂತೋಷ್ ಮೊದಲಾದವರು ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.